LATEST NEWS
ಮಂಗಳೂರು – ಪಾಲಿಕೆ ಗುತ್ತಿಗೆದಾರರ ಸಭೆ ಜೊತೆ ಮೇಯರ್ ಸಭೆ
ಮಂಗಳೂರು ಅಕ್ಟೋಬರ್ 12: ಮಂಗಳೂರು ಮಹಾನಗರಪಾಲಿಕೆಯ ಗುತ್ತಿಗೆದಾರರ ಕುಂದು ಕೊರತೆ ಮತ್ತು ಸಮಸ್ಯೆಯನ್ನು ಪರಿಶೀಲಿಸಲು ಮೇಯರ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಅಧಿಕಾರಿಗಳನ್ನೊಳಗೊಂಡ ಸಭೆ ಇಂದು ನಡೆಯಿತು.
ಸಭೆಯಲ್ಲಿ ಗುತ್ತಿಗೆದಾರರಿಗಾಗುವ ಸಮಸ್ಯೆ ಬಗ್ಗೆ ಮಾಹಿತಿ ಪಡೆದ ಮೇಯರ್ ಇದಕ್ಕೆ ಸಮಜಾಯಿಷಿಕೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು ಅದರಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ಹಲವು ವಿಷಯಗಳ ಚರ್ಚೆ ನಡೆದಿದ್ದು ಹಲವಾರು ನ್ಯೂನತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಜರುಗಿಸಲು ಮೇಯರ್ ಆದೇಶಿಸಿದರು.
ಸಭೆಯಲ್ಲಿ ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಪಟ್ಟಣಯೋಜನೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಲೋಹಿತ್ ಅಮೀನ್, ತೆರಿಗೆ ನಿಧ೯ರಣೆ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವರುಣ್ ಚೌಟ ವಿಪಕ್ಷ ನಾಯಕರಾದ ಪ್ರವೀಣ್ ಚಂದ್ರ ಆಳ್ವ ಮತ್ತು ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.