Connect with us

LATEST NEWS

ಗೋಮಾಂಸ ಮಾರಾಟ ಶಂಕೆ ಮಾಂಸದಂಗಡಿಗಳಿಗೆ ಮೇಯರ್ ದಾಳಿ

ಮಂಗಳೂರು ಅಕ್ಟೋಬರ್ 14: ಮಂಗಳೂರಿನ ಕೆಲವು ಮಾಂಸದ ಅಂಗಡಿಗಳಲ್ಲಿ ಇತರೆ ಮಾಂಸದ ಜೊತೆ ಗೋಮಾಂಸವನ್ನು ಸೇರಿಸಿ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನಲೆ ಮಂಗಳೂರು ಮೇಯರ್ ಇಂದು ನಗರದ ವಿವಿಧ ಮಾಂಸ ಮಾರಾಟ ಅಂಗಡಿಗಳಿಗೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.


ನಗರದ ಹಲವು ಮಾಂಸದಂಗಡಿಗಳಲ್ಲಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ, ಅಲ್ಲದೆ ಇತರ ಮಾಂಸಕ್ಕೆ ಗೋಮಾಂಸ ಮಿಶ್ರಣ ಮಾಡಲಾಗುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬಂದಿತ್ತು. ಈ ಹಿನ್ನಲೆ ಮೇಯರ್ ದಿವಾಕರ್ ಮಂಗಳೂರು ಪಾಲಿಕೆ ವ್ಯಾಪ್ತಿಯ ಉರ್ವಸ್ಟೋರ್, ಉರ್ವ ಮಾರ್ಕೆಟ್, ಕುದ್ರೋಳಿ ಕಸಾಯಿಖಾನೆ ಮುಂತಾದೆಡೆ ಮಾಂಸದ ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಅಕ್ರಮವಾಗಿ ಮಾರಾಟ, ಕಂಡುಬಂದಲ್ಲಿ ಪರವಾನಿಗೆ ರದ್ದು ಮಾಡುವ ಎಚ್ಚರಿಕೆ ಈ ಸಂದರ್ಭದಲ್ಲಿ ನೀಡಿದರು.