DAKSHINA KANNADA
ಮಂಗಳೂರು: ಮೇರಿಹಿಲ್ನಲ್ಲಿ ಲಘು ಭೂಕಂಪನ..!?
ಮಂಗಳೂರು, ಆಗಸ್ಟ್ 03: ಮಂಗಳೂರು ನಗರದಲ್ಲಿರುವ ಮೇರಿಹಿಲ್ ಪ್ರದೇಶದಲ್ಲಿ ಇಂದು ಬೆಳಗ್ಗೆ ಲಘು ಭೂಕಂಪನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇದನ್ನು ಭೂಕಂಪ ಮಾಪನಶಾಸ್ತ್ರ ಅಧಿಕಾರಿಗಳು ಧೃಡಪಡಿಸಿಲ್ಲ.
ಇಂದು ಬೆಳಗ್ಗೆ 10.30ರ ಸುಮಾರಿಗೆ ಸಣ್ಣ ಪ್ರಮಾಣದಲ್ಲಿ ಮೇರಿಹಿಲ್ನ ಸ್ಥಳೀಯರಿಗೆ ಕಂಪನವಾದ ಅನುಭವವಾಗಿದೆ. ಸ್ಥಳಕ್ಕೆ ಪೊಲೀಸ್ ಮತ್ತು ಇತರ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಆದರೆ ಭೂಕಂಪನ ಬಗ್ಗೆ ಭೂಕಂಪನ ಮಾಪನಶಾಸ್ತ್ರ ಅಧಿಕಾರಿಗಳು ಧೃಡಪಡಿಸಿಲ್ಲ. ಸ್ಥಳೀಯರು ಆತಂಕಪಡಬೇಕಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಮಂಗಳೂರಿನ ಲೈಟ್ಹೌಸ್ ಹಿಲ್ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿತ್ತು. ಇದೇ ರೀತಿಯ ಅನುಭವ ಇಂದು ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
You must be logged in to post a comment Login