Connect with us

DAKSHINA KANNADA

ಮಂಗಳೂರು : ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸನ್ಮಾನ

ಮಂಗಳೂರು: 2024 ನೇ ಸಾಲಿನ ಕರ್ನಾಟಕ ಸುವರ್ಣ ಸಂಭ್ರಮ ಮಹೋತ್ಸವ ಪ್ರಶಸ್ತಿ ಪುರಸ್ಕೃತರಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಾದಾನಿಗಳು ಹಾಗೂ ಗೌರವಾಧ್ಯಕ್ಷರಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ನವಂಬರ್ 16 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಮಂಗಳೂರು ಪುರಭವನದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.

ಉದ್ಯಮ ಕ್ಷೇತ್ರದ ಅದ್ವಿತೀಯ ಸಾಧಕರಾಗಿ ಸಾವಿರಾರು ಜನರ ಬದುಕಿಗೆ ಬೆಳಕಾದ ಅಭಿವೃದ್ದಿಯ ರೂವಾರಿ , ದೈವ, ದೇವಸ್ಥಾನಗಳ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗಿ ಕರಾವಳಿಯ ನೂರಾರು ಸಂಘ ಸಂಸ್ಥೆಗಳಿಗೆ ನೆರವಿನ ಶಕ್ತಿ ನೀಡಿದ ಮಹಾದಾನಿಗಳಾದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಕರ್ನಾಟಕ ಸುವರ್ಣ ಮಹೋತ್ಸವ ಪ್ರಶಸ್ತಿ ಒಲಿದು‌ ಬಂದಿದ್ದು, ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನ ಸಮಾರಂಭ ಜರಗಲಿದೆ ಎಂದು ಟ್ರಸ್ಟಿನ ಸ್ಥಾಪಕಾಧ್ಯಕ್ಷರಾದ  ಪಟ್ಲ ಸತೀಶ್ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಮಾರಂಭದಲ್ಲಿ ಇತರ ಸಂಘ ಸಂಸ್ಥೆಗಳಿಗೂವ ಗೌರವಾರ್ಪಣೆ ಮಾಡುವ ಅವಕಾಶ ಇದೆ. ಹೆಸರನ್ನು ಟ್ರಸ್ಟ್ ನ ಪ್ರಧಾನ‌ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ,ಅಡ್ಯಾರ್ (9845172865) ಅಥವಾ ಜೊತೆಕಾರ್ಯದರ್ಶಿ ಶ್ರೀ ರವಿಚಂದ್ರ ಶೆಟ್ಟಿ ಅಶೋಕನಗರ (9448623375) ಅವರಲ್ಲಿ ನೋಂದಾಯಿಸ ಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *