Connect with us

LATEST NEWS

ಮಂಗಳೂರು ಜೋಕಟ್ಟೆಯ ಯುವಕ ಇರ್ಷಾದ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತಕ್ಕೆ ಬಲಿ..!

ಮಂಗಳೂರು : ಮಂಗಳೂರು ಹೊರವಲಯದ ಜೋಕಟ್ಟೆಯ ಯುವಕ ಇರ್ಷಾದ್ ಸೌದಿ ಅರೇಬಿಯಾದಲ್ಲಿ ಹೃದಯಾಘಾತದಿಂದ ದಾರುಣ ಅಂತ್ಯ ಕಂಡಿದ್ದಾನೆ.

ಜೋಕಟ್ಟೆಯ ಕೆಬಿಎಸ್‌ಸಿ ನಿವಾಸಿ ಇರ್ಷಾದ್ (33) ಸೌದಿ ಅರೆಬಿಯಾದ ಅಲ್ ಕೋಬರ್ ನಲ್ಲಿ ಮೃತಪಟ್ಟ ಯುವಕನಾಗಿದ್ದಾನೆ. ಕೆಬಿಎಸ್‌ ನಿವಾಸಿ ಅಬ್ದುಲ್‌ ರಝಾಕ್‌ ಅವರ ಮಗ ಇರ್ಶಾದ್‌ 7ವರ್ಷಗಳಿಂದ ಸೌದಿ ಅರೇಬಿಯಾದ ಅಲ್‌ ಕೋಬರ್‌ ನಲ್ಲಿ ಇಲೆಕ್ಟ್ರಾನಿಕ್‌ ಅಂಗಡಿಯೊಂದರಲ್ಲಿ ಕೆಲಸಕ್ಕೆ ಇದ್ದರು. ಇತ್ತೀಚೆಗೆ ಒಂದೂವರೆ ವರ್ಷಗಳ ಹಿಂದೆ ಊರಿಗೆ ಬಂದು ತೆರಳಿದ್ದರು. ಗುರುವಾರ ಬೆಳಗ್ಗೆ ಇರ್ಶಾದ್‌ ಅವರಿಗೆ ತೀವೃ ತರಹದ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಅವರ ಸ್ನೇಹಿತರು ಅಲ್ ಕೋಬರ್‌ ನ ಅಲ್‌ ಸಲಾಮ್‌ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಇರ್ಶಾದ್‌ ಹೃದಯಾಘಾತ ಕ್ಕೊಳಗಾಗಿ ಮೃತಪಟ್ಟಿದ್ದಾಗಿ ಘೋಷಿಸಿದರು ಎಂದು ಅವರ ಕುಟುಂಬ ಮೂಲ ಮಾಹಿತಿ ನೀಡಿದೆ. ಮೃತ ಇರ್ಶಾದ್‌ ವಿವಾಹಿತರಾಗಿದ್ದು, ತಂದೆ, ತಾಯಿ, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯನ್ನು ಅಗಲಿದ್ದಾರೆ.

ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಸಹೋದರ ಇಮ್ರಾನ್‌ ರಿಗೆ ವೀಡಿಯೊ ಕರೆ ಮಾಡಿದ್ದ ಇರ್ಶಾದ್‌, ಅನಾರೋಗ್ಯ ವಿದ್ದು ಊರಿಗೆ ಬರುವುದಾಗಿ ಹೇಳಿದ್ದ. ಊರಿಗೆ ಬಂದು ಚಿಕಿತ್ಸೆ ಪಡೆಯುವ ಕುರಿತು ಸಹೋದರನ ಜೊತೆ ಸಮಾಲೋಚನೆ ಯನ್ನೂ ಮಾಡಿದ್ದ. ಎಲ್ಲರೊಂದಿಗೂ ವೀಡಿಯೊ ಕಾಲ್‌ ನಲ್ಲಿ ಮಾತನಾಡಿ ಕರೆ ಕಟ್‌ ಮಾಡಿದ್ದ. ಆದರೆ, ಕರೆ ಕಟ್‌ ಮಾಡಿದ ಅರ್ಧಗಂಟೆಯಲ್ಲೇ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಇರ್ಶಾದ್‌ ಮೃತದೇಹ ಸೌದಿ ಅರೆಬಿಯಾದ ಅಲ್‌ ಕೋಬರ್‌ ನ ಅಲ್‌ ಸಲಾಮ್‌ ಆಸ್ಪತ್ರೆಯಲ್ಲಿದ್ದು,ಇಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಅಲ್‌ ಕೋಬರ್ ನ ಮಸೀದಿಯಲ್ಲಿ ದಫನ ಕಾರ್ಯ ನಡೆಯಲಿದೆ ಎಂದು ಅವರ ಸಹೋದರ ಇಮ್ರಾನ್‌ ಮಾಹಿತಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೃದಯಾಘಾತಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಲ್ಲೂ ಏನೂ ಆರೋಗ್ಯ ಸಮಸ್ಯೆಗಳಿಲ್ಲದ ಯುವಜನಾಂಗ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗುತ್ತಿದೆ.  ಆದ್ರೆ  ಯಾಕಾಗಿ ಈ ಹೃದಯಾಗಾತಗಳು ಹೆಚ್ಚಾಗುತ್ತಿವೆ ಕಾರಣಗಳೇನು? ಕೊರೊನಾ ಸಾಂಕ್ರಾಮಿಕ ದಿಂದ ಅಥವಾ ಕೋವಿಡ್ ಲಸಿಕೆಯ ಅಡ್ಡ ಪರಿಣಾಮವೇ ಎಂಬುವುದು ಇನ್ನೂ ಧೃಡಪಟ್ಟಿಲ್ಲ. ಈ ಬಗ್ಗೆ ಗಂಭೀರ ಅಧ್ಯಾಯನಗಳು ಅಗತ್ಯವಾಗಿದೆ.

 

Share Information
Advertisement
Click to comment

You must be logged in to post a comment Login

Leave a Reply