ಮಂಗಳೂರು, ಸೆಪ್ಟೆಂಬರ್ 4: ಅಶ್ವಿನಿ (21) ಎಂಬವರು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇವರು ಕಳೆದ 1 ವರ್ಷಗಳ ಹಿಂದೆ ಇನ್‍ಸ್ಟಾಗ್ರಾಂನಲ್ಲಿ ಚಿಕ್ಕಬಳ್ಳಾಪುರದ ಸಿದ್ಲಗಟ್ಟೆ ಎಂಬಲ್ಲಿನ ಮಹೇಶ್ ಎಂಬಾತನ ಜೊತೆ ಪರಿಚಯವಾಗಿ ಮಾತುಕತೆ ನಡೆಸುತ್ತಿದ್ದು, ಆತನೊಂದಿಗೆ ವಿವಾಹವಾಗುತ್ತೇನೆ ಎಂದು ಹೇಳಿ ಕಳೆದ ಒಂದು ವರ್ಷದ ಹಿಂದೆ ಆತನೊಂದಿಗೆ ಹೊರಟು ಹೋಗಿದ್ದರು. ಕಳೆದ ಒಂದು ತಿಂಗಳಿನಿಂದ ಮನೆಯವರಿಗೆ ಕರೆ ಮಾಡಿ ನನ್ನನ್ನು ಇಲ್ಲಿ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಹೇಳಿ, ಸೆಪ್ಟೆಂಬರ್ 1 ರಂದು ರಾತ್ರಿ ಸುಮಾರು 11.30 ಗಂಟೆಗೆ ಮಂಗಳೂರಿನ ಮನೆಗೆ ಬಂದಿದ್ದು, ಸೆಪ್ಟೆಂಬರ್ 2 ರಂದು ಹಗಲು ಮನೆಯಲ್ಲೇ ಇದ್ದು ಮರುದಿನ ಬೆಳಗ್ಗಿನ ಜಾವ 4 ಗಂಟೆಗೆ ಮನೆಯಿಂದ ಹೋದವರು ಕಾಣೆಯಾಗಿದ್ದಾರೆ.

ಕಾಣೆಯಾದವರ ಚಹರೆ:- ಎತ್ತರ ಸುಮಾರು 5.3 ಅಡಿ, ಎಣ್ಣೆ ಕಪ್ಪು ಮೈಬಣ್ಣ, ಕಪ್ಪು ಕೂದಲು, ಸಪೂರ ಶರೀರ ಹೊಂದಿರುತ್ತಾರೆ. ಕನ್ನಡ, ಇಂಗ್ಲೀಷ್ , ತುಳು, ತಮಿಳು ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಗಿಳಿ ಹಸಿರು ಬಣ್ಣದ ಚೂಡಿದಾರ್ ಟಾಪ್, ಬಿಳಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್ ಧರಿಸಿದ್ದರು. ಕಾಣೆಯಾದವರ ಗುರುತು ಪತ್ತೆಯಾದಲ್ಲಿ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆ, ವಾಮಂಜೂರು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share Information