LATEST NEWS
ಒಂದು ಕಂಪ್ಲೆಂಟ್ ಮಾದಕ ವಸ್ತು ಜಾಲದ ಹಿಂದೆ ಬಿದ್ದ ಮಂಗಳೂರು ಪೊಲೀಸರು – ಹೊರ ರಾಜ್ಯ ಡ್ರಗ್ಸ್ ಸಪ್ಲೈಯರ್ ಅರೆಸ್ಟ್

ಮಂಗಳೂರು ಜುಲೈ 09: ತನ್ನ ಮಗನ ಮಾದಕ ವಸ್ತು ಸೇವನೆ ಬಗ್ಗೆ ಪೋಷಕರು ಕೊಟ್ಟ ಒಂದು ಕಂಪ್ಲೆಂಟ್ ನ ಹಿಂದೆ ಬಿದ್ದ ಮಂಗಳೂರು ಪೊಲೀಸರು ಇದೀಗ ಮಾದಕ ವಸ್ತುವಿನ ನೆಟ್ ವರ್ಕ್ ಹಿಂದೆ ಬಿದ್ದಿದ್ದಾರೆ. ಗಾಂಜಾ ಸೇವೆನೆ ಮಾಡಿದವನ ಮಾಹಿತಿ ಪಡೆದ ಪೊಲೀಸರು ಇದೀಗ ಲೋಕಲ್ ಸಪ್ಲೈಯರ್ ಗಳನ್ನು ಹಿಡಿದು ಅರೆಸ್ಟ್ ಮಾಡಿದ್ದಾರೆ. ಇದರ ಜೊತೆಗೆ ಲೋಕಲ್ ಸಪ್ಲೈಯರ್ ಗಳಿಗೆ ಮಾದಕ ವಸ್ತು ನೀಡಿದ ಅಂತರ್ ರಾಜ್ಯ ಖದೀಮರ ಹಿಂದೆ ಬಿದ್ದಿದ್ದು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ಮಧ್ಯಪ್ರದೇಶದ ಮಾಯಾರಾಮ್ (32) , ಮಹಾರಾಷ್ಟ್ರದ ಪ್ರೇಮಸಿಂಗ್ ರಾಮ ಪವಾರ (48), ಅನಿಲ್ ಪ್ರಕಾಶ್ ಕೋಲಿ (35) ಎಂದು ಗುರುತಿಸಲಾಗಿದೆ.

ಜುಲೈ 2 ರಂದು ಮಂಗಳೂರಿನ ಸೆನ್ ಠಾಣೆಯಲ್ಲಿ ಗಾಂಜಾ ಸೇವನೆ ಕುರಿತಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಮಾದಕ ವಸ್ತು ಸೇವನೆ ಮಾಡುವವರಿಂದ ತನಿಖೆ ಆರಂಭಿಸಿ ಹಂತ ಹಂತವಾಗಿ ಮಾದಕ ವಸ್ತಗಳನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ 06 ಜನರನ್ನು ಪತ್ತೆ ಮಾಡಿ ಈಗಾಗಲೇ ದಸ್ತಗಿರಿ ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು,ಮಾನ್ಯ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತದೆ.
ಪ್ರಕರಣ ತನಿಖೆಯ ವೇಳೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದ ಮಾದಕ ವಸ್ತು ಸರಬರಾಜು ಆಗುತ್ತಿರುವ ಮಾಹಿತಿ ತಿಳಿದುಬಂದಿದ್ದು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಕ್ಕೆ ವಿಶೇಷ ತಂಡವನ್ನು ಕಳುಹಿಸಿ 03 ಜನ ಆರೋಪಿತರನ್ನು ಪತ್ತೆ ಮಾಡಿ ದಸ್ತಗಿರಿ ಕ್ರಮ ಕೈಗೊಂಡು ಈ ದಿನ ದಿನಾಂಕ:09-07-2025 ರಂದು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತದೆ. ಆರೋಪಿತರು ಕೃತ್ಯಕ್ಕೆ ಬಳಸಿದ 03 ಮೊಬೈಲ್ ಫೋನ್ ಗಳು ಹಾಗೂ ನಗದು ಹಣ ರೂ.1,78,920/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು ಇನ್ನುಳಿದ ಆರೋಪಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು. ಸದ್ರಿ ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣಾ ಮತ್ತು ಮಂಗಳೂರು ನಗರದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿರವರು ಭಾಗವಹಿಸಿರುತ್ತಾರೆ
1 Comment