ಮಂಗಳೂರು ನವೆಂಬರ್ 04: ಮಂಗಳೂರಿನಲ್ಲಿ ಯಶಸ್ವಿ ಉದ್ಯಮಿಯಾಗಿರುವ ಉತ್ತರಪ್ರದೇಶ ಮೂಲದ ಹಾಶೀಂ ಖಾನ್ ತನ್ನ ಹುಟ್ಟೂರು ಉತ್ತರ ಪ್ರದೇಶದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕುಟುಂಬದ ಕಾರ್ಯಕ್ರಮಕ್ಕಾಗಿ ಊರಿಗೆ ತೆರಳಿದ್ದ ಸಂದರ್ಭ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದೂರದ ಉತ್ತರ ಪ್ರದೇಶದಿಂದ ಉದ್ಯೋಗ ನಿಮಿತ್ತ ಸಣ್ಣ ವಯಸ್ಸಿನಲ್ಲೇ ಮಂಗಳೂರಿಗೆ ಆಗಮಿಸಿದ್ದ ಅವರು ಬಳಿಕ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಅಷ್ಟೇ ಅಲ್ಲ ಬಡವರ ಕಷ್ಟ ಅರಿತು ಅವರಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ಅದೆಷ್ಟೋ ಬಡಕುಟುಂಬಗಳಿಗೆ ತಾವೇ ಖುದ್ದು ಆಹಾರ ಸಾಮಾಗ್ರಿಗಳನ್ನು ನೀಡಿ ಸಮಾಜಸೇವೆ ಮಾಡಿದ್ದರು.



