Connect with us

LATEST NEWS

ಮಂಗಳೂರು : ಜಾನುವಾರುಗಳಿಗೆ ಬಸ್ ಢಿಕ್ಕಿ: ಒಂದು ಮೃತ್ಯು ಮತ್ತೊಂದು ಗಂಭೀರ..!

ಮಂಗಳೂರು: ಖಾಸಾಗಿ ಬಸ್ಸೊಂದು  ಜಾನುವಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ಜಾನುವಾರು ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತೊಂದು ಗಂಭೀರಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಮಂಗಳೂರಿನ ಕೊಟ್ಟಾರ ಕೋಡಿಕಲ್ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ.

ಕುಂದಾಪುರದಿಂದ ಮೈಸೂರು- ಮಂಡ್ಯ ತೆರಳುವ ದುರ್ಗಾಂಬಾ ಮೋಟಾಸ್೯ ಬಸ್ ಚಾಲಕನ ಧಾವಂತಕ್ಕೆ ಹೆದ್ದಾರಿಯಲ್ಲಿ ಒಂದು ಹಸು ಸ್ಥಳದಲ್ಲೇ  ಸಾವನ್ನಪ್ಪಿದರೆ, ಇನ್ನೊಂದು ಗಂಭೀರ ಗಾಯಗೊಂಡಿದೆ.

ಅಪಘಾತ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ವಾಹನ ಸವಾರರು ಬಸ್ ತಡೆದು ಚಾಲಕನನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಸ್ಥಿತಿ ಯನ್ನು ತಿಳಿಗೊಳಿಸಿದ್ದಾರೆ.  ಈ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Advertisement
Click to comment

You must be logged in to post a comment Login

Leave a Reply