Connect with us

    LATEST NEWS

    ಮಂಗಳೂರು ವಿಮಾನ ನಿಲ್ದಾಣದ ಬಳಕೆದಾರರ ಅಭಿವೃದ್ದಿ ಶುಲ್ಕ ಏರಿಕೆ…!!

    ಮಂಗಳೂರು ಜನವರಿ 15: ಫೆಬ್ರವರಿ 1 ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರು ಇನ್ನು ಮುಂದೆ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್‌ ಅನ್ನು ನಿರ್ಗಮನ ಪ್ರಯಾಣಿಕರು ಮಾತ್ರ ಪಾವತಿಸುತ್ತಿದ್ದಾರೆ. ಆದರೆ, ಫೆಬ್ರವರಿಯಿಂದ ಆಗಮನ ಪ್ರಯಾಣಿಕರು ಕೂಡ ಈ ಶುಲ್ಕ ಪಾವತಿಸಬೇಕಿದೆ.


    ಎಪ್ರಿಲ್‌ನಿಂದ ದೇಶೀಯ ನಿರ್ಗಮನ ಪ್ರಯಾಣಿಕರು 150 ರೂ. ಬದಲು 560 ರೂ. ಪಾವತಿಸಬೇಕು. ಈ ಶುಲ್ಕ ಪ್ರತೀ ವರ್ಷ ಏರಲಿದೆ. ಅಂತರಾಷ್ಟ್ರೀಯ ನಿರ್ಗಮನ ಪ್ರಯಾಣಿಕರು ಈಗ 825 ಪಾವತಿಸುತ್ತಿದ್ದರೆ ಈ ಶುಲ್ಕ ಎಪ್ರಿಲ್‌ನಿಂದ 1,105 ಆಗಲಿದ್ದು, ಮುಂದಿನ ವರ್ಷ ಮತ್ತೆ ಏರಲಿದೆ. ಆಗಮನ ದೇಶೀಯ ಪ್ರಯಾಣಿಕರು ಎಪ್ರಿಲ್‌ನಿಂದ ಮೊದಲ ಬಾರಿಗೆ 150 ರೂ. ಶುಲ್ಕ ಪಾವತಿಸಲಿದ್ದು, ಮುಂದಿನ ವರ್ಷ ಮಾರ್ಚ್‌ ಬಳಿ ಕ 240 ಪಾವತಿಸಬೇಕಾಗಿದೆ.

    ಈ ಮಧ್ಯೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈಗಿರುವ ದರವು ಫೆಬ್ರವರಿ ಹಾಗೂ ಮಾರ್ಚ್‌ಗೆ ಮಾತ್ರ ಅನ್ವಯವಾಗುವಂತೆ 80 ರೂ. ಇಳಿಕೆಯಾಗಲಿದ್ದು, ಎಪ್ರಿಲ್‌ನಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply