Connect with us

    LATEST NEWS

    ಮ್ಯಾಂಗಲೋರ್‌ ಅಲ್ಲ ಇನ್ನು “ಮಂಗಳೂರು”…..!!

    ಮಂಗಳೂರು ನವೆಂಬರ್ 04: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಾಖಲೆಗಳಲ್ಲಿರುವ “ಮ್ಯಾಂಗಲೋರ್‌’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರನ್ನು ತೆಗೆದು ಇದೀಗ “ಮಂಗಳೂರು’ ಎಂದು ಬದಲಾವಣೆ ಮಾಡಿ ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶಿಸಿದೆ.


    ವಿಮಾನ ನಿಲ್ದಾಣದಲ್ಲಿರುವ ಬೋರ್ಡ್‌ ಸಹಿತ ಸ್ವಾಗತ ಕಮಾನುಗಳಲ್ಲಿ ಈಗಾಗಲೇ “ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಬರೆಯಲಾಗಿದೆ. ಆದರೆ ಪ್ರಾಧಿಕಾರದ ದಾಖಲೆಗಳಲ್ಲಿ ಮಾತ್ರ “ಮ್ಯಾಂಗಲೋರ್‌’ ಎಂದೇ ಉಲ್ಲೇಖ ಬಾಕಿಯಾಗಿತ್ತು. ಮಂಗಳೂರು ನಗರದಲ್ಲಿಯೂ “ಮಂಗಳೂರು’ ಪದ ಬಳಕೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ. ಡಿ. 1 ರಿಂದ ಇದು ಜಾರಿಗೆ ಬರಲಿದೆ ಎಂದು ಮೂಲಗಳು ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply