ಮಂಗಳೂರು ನವೆಂಬರ್ 11 : ಪಕ್ಕದ ಕೇರಳದಲ್ಲಿ ಕಣ್ಣೂರು ಅಂತರಾಷ್ಚ್ರೀಯ ಏರ್ ಪೋರ್ಟ್ ಇದ್ದರೂ ಮಂಗಳೂರು ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2025 -26ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ಮಾಸಿಕ ಪ್ರಯಾಣಿಕರ ದಟ್ಟಣೆಯನ್ನು ದಾಖಲಿಸಿದೆ.

ಕಳೆದ ಅಕ್ಟೋಬರ್‌ತಿಂಗಳಲ್ಲಿ ಒಟ್ಟು 2.28 ಲಕ್ಷ ಪ್ರಯಾಣಿಕರು ವಿಮಾನ ನಿಲ್ದಾಣದ ಮೂಲಕ ಸಂಚರಿಸಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ‘X’ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಈ ಅಕ್ಟೋಬರ್ ನಿಜಕ್ಕೂ ಪ್ರಯಾಣಿಕರ ಸಂಖ್ಯೆಯಲ್ಲಿ ಉತ್ತುಂಗಕ್ಕೆ ತಲುಪಿದ ತಿಂಗಳು. ಮಂಗಳೂರು ವಿಮಾನ ನಿಲ್ದಾಣ ಹೊಸ ಮೈಲಿಗಲ್ಲನ್ನು ಸಾಧಿಸಿದೆ ಎಂದು ತಿಳಿಸಿದೆ.
ಒಟ್ಟು ಪ್ರಯಾಣಿಕರು 2.28 ಲಕ್ಷ, ದೇಶಿಯ ಪ್ರಯಾಣಿಕರು 1.53 ಲಕ್ಷ, ಅಂತಾರಾಷ್ಟ್ರೀಯ ಪ್ರಯಾಣಿಕರು 74,294 ಪ್ರಯಾಣಿಸಿದ್ದಾರೆ.
ಅಕ್ಟೋಬರ್‌ನಲ್ಲಿ ಒಟ್ಟು 1,641 ವಿಮಾನ ಸಂಚಾರವನ್ನು ನಿರ್ವಹಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಕೂಡ ಗರಿಷ್ಠ ದಾಖಲೆಯಾಗಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.



