DAKSHINA KANNADA
ಮಂಗಳೂರು : ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 1.35 ಕೋ.ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶ..!
ಮಂಗಳೂರು: ವಾಹನ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಬರೋಬ್ಬರಿ 1.35 ಕೋ.ರೂ. ಪರಿಹಾರ ನೀಡಲು ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯ ಖಾಸಾಗಿ ವಿಮಾ ಕಂಪೆನಿಗೆ ಮಹತ್ವದ ಆದೇಶ ನೀಡಿದೆ.
ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯ ನ್ಯಾಯಾಧೀಶೆ ಲಕ್ಷ್ಮಿ ಜಿ.ಎಂ. ವಿಮಾ ಕಂಪನಿಗೆ ಈ ಆದೇಶ ನೀಡಿದೆ. ಪಣಂಬೂರಿನ ಎಂಸಿಎಫ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯ 2018ರ ಮೇ 18ರಂದು ತನ್ನ ಬೈಕ್‌ನಲ್ಲಿ ಕರ್ತವ್ಯಕ್ಕೆ ತೆರಳುದ್ದಾಗ ನಗರದ ಕೊಟ್ಟಾರ ಚೌಕಿ ಬಳಿಯ ರಾಜಸ್ಥಾನ ನೋಂದಣಿಯ ಲಾರಿಯೊಂದು ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಮಹೇಶ್ ಭಟ್ ಮೃತಪಟ್ಟಿದ್ದರು. ಅದರಂತೆ ಮಂಗಳೂರಿನ ಒಂದನೇ ಹೆಚ್ಚುವರಿ ಸೀನಿಯರ್ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ಮೋಟಾರು ವಾಹನ ಅಪಘಾತ ಪರಿಹಾರ ಕಾಯ್ದೆಯಡಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ವಾದ-ಪ್ರತಿವಾದ ಆಲಿಸಿದ ವಿಮಾ ಸಂಸ್ಥೆಯಾದ ಯುನಿವರ್ಸಲ್ ಸೊಂಪೋ ಜನರಲ್ ಇನ್ಸೂರೆನ್ಸ್ ಕಂಪನಿಯು 1.06 ಕೋ.ರೂ. ಪರಿಹಾರವನ್ನು ಶೇ.6ರಷ್ಟು ಬಡ್ಡಿ ಸಹಿತ 1.35 ಕೋ.ರೂ.ಗಳ ಪರಿಹಾರವನ್ನು ಅರ್ಜಿದಾರರಿಗೆ ನೀಡಲು ನ್ಯಾಯಾಲಯವು ಆದೇಶ ನೀಡಿದೆ. ಪರಿಹಾರ ಧನ ಪಡೆಯಲು ಮೃತರ ಪತ್ನಿ, ಅವರ ಪುತ್ರ ಹಾಗೂ ಮೃತರ ಹೆತ್ತವರು ಅರ್ಹರಾಗಿದ್ದಾರೆಂದು ನ್ಯಾಯಾಲಯವು ತಿಳಿಸಿದೆ. ಅರ್ಜಿದಾರರ ಪರವಾಗಿ ವಕೀಲರಾದ ಎ. ದಿನೇಶ್ ಭಂಡಾರಿ, ಕೆ.ಎಸ್.ಎನ್. ಅಡಿಗ, ಪ್ರೀತಿಕಾ ಕೆ.ಎಂ., ತೃಪ್ತಿ ವಾದಿಸಿದ್ದರು.
You must be logged in to post a comment Login