ಮುರಿದು ಬೀಳುವ ಕಟ್ಟಡಕ್ಕೆ ಮತ್ತೆ 48 ಲಕ್ಷ ಖರ್ಚು ಮಾಡುತ್ತಿರುವ ಅಧಿಕಾರಿಗಳು

ಮಂಗಳೂರು ಜುಲೈ 3: ಶಿಥಿಲಾವಸ್ಥೆಯಲ್ಲಿ ಮಂಗಳಾಸ್ಟೇಡಿಯಂ ನ ಪೆವಿಲಿಯನ್ ಕಟ್ಟಡಕ್ಕೆ ಮತ್ತೆ ತೇಪೆ ಹಾಕುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದು, ಈಗಾಗಲೇ ಇದರ ಕಾಮಗಾರಿ ಕೂಡ ಆರಂಭವಾಗಿದೆ.

ಸಂಪೂರ್ಣ ಶಿಥಿಲಾವಸ್ಥೆಯಲ್ಲಿ ಮಂಗಳಾ ಸ್ಟೇಡಿಯಂ ಪೆವಿಲಿಯನ್ ಕಟ್ಟಡಕ್ಕೆ ಈಗ ಮತ್ತೆ ದುರಸ್ಥಿ ಭಾಗ್ಯ ಒದಗಿ ಬಂದಿದೆ. ಈಗಾಗಲೇ ತೀರಾ ನಾದುರಸ್ತಿಯಲ್ಲಿದ್ದು ಕಟ್ಟಡದ ಸ್ಲ್ಯಾ ಬ್ ತುಂಡುಗಳು ಉದುರಿ ಬೀಳುತ್ತಿದ್ದು, ಕಾಂಕ್ರೀಟಿಗೆ ಹಾಕಿದ ಕಬ್ಬಿಣ ಕೂಡ ತುಕ್ಕುಕೂಡ ಹಿಡಿದಿದೆ.

ಇನ್ನೆನು ಇದನ್ನು ನೆಲಸಮ ಮಾಡಿ ಹೊಸ ಕಟ್ಟಡ ರಚನೆ ಮಾಡಬೇಕಾದ ಅಧಿಕಾರಿಗಳು ಅದೇ ಪೆವಿಲಿಯನ್‌ ಕಟ್ಟಡಕ್ಕೆ ಮತ್ತೆ ತೇಪೆ ಕಾರ್ಯ ಆರಂಭಿಸಿದ್ದಾರೆ. ಅದು ಬರೋಬ್ಬರಿ ಸುಮಾರು 48 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗುತ್ತಿರುವುದಕ್ಕೆ ಮತ್ತು ಅಧಿಕಾರಿಗಳ ಈ ಬೇಜವಾಬ್ದಾರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಟೇಡಿಯಂಗೆ ಕ್ರೀಡಾ ಅಭ್ಯಾಸಕ್ಕೆ ಬರುವ ನೂರಾರು ಮಕ್ಕಳು- ದೊಡ್ಡವರು ಇದೇ ದುರಸ್ಥಿಯಲ್ಲಿರು ಕಟ್ಟಡದ ಅಡಿಯಲ್ಲಿ ವಿರಮಿಸುತ್ತಿದ್ದು, ಅಪಾಯಕ್ಕೆ ಆಹ್ವಾನ ನೀಡುವ ಹಂತದಲ್ಲಿರುವ ಕಟ್ಟಡವನ್ನು ಮತ್ತೆ ಅಷ್ಟು ದೊಡ್ಡ ಮೊತ್ತದ ಹಣದಲ್ಲಿ ದುರಸ್ಥಿ ಕಾರ್ಯ ನಡೆಯುತ್ತಿರುವ ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿದೆ.

7 Shares

Facebook Comments

comments