ಮಂಡ್ಯ, ನವೆಂಬರ್ 02: ಪ್ರವಾಸಕ್ಕೆ ಬಂದ ವೇಳೆ ನಾಲೆಯಲ್ಲಿ ಬಟ್ಟೆ ತೊಳೆಯುವಾಗ ಐವರು ವಿಧ್ಯಾರ್ಥಿಗಳು ನೀರುಪಾಲಾಗಿದ್ದರು, ಈ ವೇಳೆ ಓರ್ವ ಬಾಲಕನ ರಕ್ಷಣೆ ಮಾಡಲಾಗಿದ್ದು, ನಾಪತ್ತೆಯಾಗಿದ್ದ ನಾಲ್ವರು ಮಕ್ಕಳ ಮೃತದೇಹ ಪತ್ತೆಯಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ರಾಮಸ್ವಾಮಿ ನಾಲೆಯಲ್ಲಿ ಈ ಘೋರ ದುರಂತ ಸಂಭವಿಸಿದೆ.

ಘಟನೆಯಲ್ಲಿ ಬದುಕುಳಿದಿರುವ ಬಾಲಕನಿಗೆ ಮೈಸೂರಿನ ಕೆಆರ್ಆಸ್ಪತ್ರೆಯಲ್ಲಿ ಚಿಕ್ಸಿತೆ ಮುಂದುವರೆದಿದೆ. ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಯಿಷಾ(14), ಮೊಹಮದ್ ಆಯನ್(4), ಹನಿ(14), ಅಫ್ರಿನ್(13) ಮತ್ತು ಥರ್ಬಿನ್(13) ನಾಲೆಯಲ್ಲಿ ಕೊಚ್ಚಿ ಹೋಗಿದ್ದರು. ಸ್ಥಳಿಯರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಸಹಾಯದಿಂದ ಆಯಿಷಾ ಮತ್ತು ಮೊಹಮ್ಮದ್ ಆಯನ್ನ ರಕ್ಷಣೆ ಮಾಡಿ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಯಿಷಾ ಸಾವನ್ನಪ್ಪಿದ್ದಾಳೆ. ಆಯನ್ಗೆ ಚಿಕ್ಸಿತೆ ಮುಂದುವರೆದಿದೆ.
read this ಕಡಬ – ಮೀನು ಮಾರಾಟ ವಿಚಾರಕ್ಕೆ ರಸ್ತೆ ಮದ್ಯೆಯೇ ಹೊಡೆದಾಟ – ವಿಡಿಯೋ ವೈರಲ್
ಶನಿವಾರ ಮೈಸೂರಿನ ಶಾಂತಿನಗರದ ಮದರಸದಿಂದ ಮೂವರು ಸಿಬ್ಬಂದಿ ಜೊತೆ ಒಟ್ಟು 15 ಮಕ್ಕಳು ಪ್ರವಾಸಕ್ಕೆ ಆಗಮಿಸಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಮಂಡ್ಯ ಕೊಪ್ಪಲು ಬಳಿಯ ನಾಲೆಗೆ ಬಂದಿದ್ದ ಮಕ್ಕಳು, ನಾಲೆಯಲ್ಲಿ ಇಳಿದು ಆಟವಾಡಲು ಮುಂದಾಗಿದ್ದರು. ಈ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.
READ THIS ವಾಟ್ಸಪ್ ಗೆ ಬಂದ ಎಪಿಕೆ ಪೈಲ್ ಡೌನ್ ಲೋಡ್ ಮಾಡಿ 3 ಲಕ್ಷ ಕಳೆದುಕೊಂಡ ಮಂಗಳೂರಿನ ಅಜ್ಜ
ಸಂಜೆಯಾಗಿದ್ದರಿಂದ ನಿನ್ನೆ ಶೋಧ ಕಾರ್ಯ ಸ್ಥಗಿತಗೊಳಿಸಿದ್ದ ಸಿಬ್ಬಂದಿ, ಇಂದು ಮತ್ತೆ ಶೋಧ ಕಾರ್ಯ ಆರಂಭಿಸಿದ್ದರು. ಬೆಳಿಗ್ಗೆಯೇ ಅಫ್ರಿನ್ ಶವ ನಾಲೆಯಲ್ಲಿ ಪತ್ತೆಯಾಗಿತ್ತು. ಬಳಿಕ ಮಧ್ಯಾಹ್ನದ ಹೊತ್ತಿಗೆ ಹನಿ, ಥರ್ಬಿನ್ ಮೃತದೇಹ ಕೂಡ ನಾಲೆಯಲ್ಲಿ ಬಿದ್ದ ಜಾಗದಿಂದ 7 ಕಿ.ಮೀ ದೂರದಲ್ಲಿ ಸಿಕ್ಕಿವೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆ ಮಾಡಲಾಗಿದೆ.



