KARNATAKA
ಪಾಂಡವಪುರ – ಬೈಕ್ ಮೆಕ್ಯಾನಿಕ್ ಗೆ ಕೇರಳದ 25 ಕೋಟಿ ಬಂಪರ್ ಲಾಟರಿ
ಮಂಡ್ಯ ಅಕ್ಟೋಬರ್ 10: ಕೇರಳದ ತಿರುವೋಣಂ ಬಂಪರ್ ಲಾಟರಿ ಈ ಬಾರಿ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ಬೈಕ್ ಮೆಕ್ಯಾನಿಕ್ ಅಲ್ತಾಫ್ ಎಂಬವರಿಗೆ ಸಿಕ್ಕಿದೆ.
ಕೇರಳದ ತಿರುವೋಣಂ ಹಬ್ಬದ ಪ್ರಯುಕ್ತ ನಡೆದ 25 ಕೋಟಿ ರೂ. ಮೌಲ್ಯದ ಬಂಪರ್ ಲಾಟರಿ ಗೆದ್ದಿದ್ದಾರೆ. ಪರಿಚಯಸ್ತರ ಮೂಲಕ ಖರೀದಿಸಿದ್ದ ಲಾಟರಿ ಟಿಕೆಟ್ ಇದೀಗ ಇವರ ಬದುಕು ಬದಲಿಸಿದೆ. ತೆರಿಗೆ ಕಡಿತವಾಗಿ 12 ಕೋಟಿ ರೂ. ಲಾಟರಿ ಹಣವನ್ನು ಇವರು ಪಡೆಯಲಿದ್ದಾರೆ. ಲಾಟರಿ ಗೆದ್ದ ವಿಚಾರ ತಿಳಿಯುತ್ತಿದ್ದಂತೆ ಅಲ್ತಾಫ್ ಕೇರಳಕ್ಕೆ ಹೊರಟಿದ್ದಾರೆ. ಲಾಟರಿ ಹಣ ಪಡೆಯುವ ಪ್ರಕ್ರಿಯೆ ಪೂರೈಸಿ ಹಣ ಪಡೆದುಕೊಳ್ಳಲಿದ್ದಾರೆ.
ಬುಧವಾರ ತಿರುವೋಣಂ ಬಂಪರ್ ಲಾಟರಿ ಡ್ರಾ ನಡೆಯಿತು. 71 ಲಕ್ಷ ಟಿಕೆಟ್‌ಗಳು ಮಾರಾಟವಾದ ಓಣಂ ಬಂಪರ್‌ನಲ್ಲಿ 25 ಕೋಟಿ ರೂ ಮೊದಲ ಬಹುಮಾನವಾಗಿತ್ತು. ಅಂತಿಮವಾಗಿ, ಅದು ಕರ್ನಾಟಕದ ಪಾಂಡವಪುರದ ಮೂಲದ ಅಲ್ತಾಫ್ ಎಂಬವರ ಪಾಲಾಗಿದೆ. 25 ಕೋಟಿ ರೂ ಲಾಟರಿ ಹೊಡೆದವರಿಗೆ ಆ ಮೊತ್ತ ಪೂರ್ತಿ ಕೈಗೆ ಸಿಗುವುದಿಲ್ಲ. ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ವಿಜೇತರಿಗೆ ನೀಡಲಾಗುತ್ತದೆ.
You must be logged in to post a comment Login