Connect with us

LATEST NEWS

ಬಾರ್ಕೂರು – ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಉಡುಪಿ ಎಪ್ರಿಲ್ 23: ಬಾರ್ಕೂರಿನ ಎನ್ ಜೆ ಸಿ ಕಾಲೇಜಿನಲ್ಲಿ ಗುಮಾಸ್ತರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಮೃತರನ್ನು ಗುರುರಾಜ್ ರಾವ್ ಬಿ. ( 47) ಎಂದು ಗುರುತಿಸಲಾಗಿದ್ದು ಇವರು ವಿಪರೀತ ಮದ್ಯ ವ್ಯಸನಿಯಾಗಿದ್ದ ಗುರುರಾಜ್ ವ್ಯಸನಮುಕ್ತಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ಸರಿಯಾಗಿ ಔಷಧವನ್ನು ಸೇವಿಸದೆ ಕಳೆದ ಕೆಲವು ದಿನಗಳಿಂದ ಗುಮಾಸ್ತ ಕೆಲಸಕ್ಕೆ ಗೈರು ಹಾಜರಾಗಿದ್ದರು. ಅಲ್ಲದೆ ಮಾನಸಿಕವಾಗಿ ಗೊಂದಲದಲ್ಲಿದ್ದ ಗುರುರಾಜ್ ನೇಣಿಗೆ ಶರಣಾಗಿ ಮೃತಪಟ್ಟಿದ್ದಾರೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.