Connect with us

    DAKSHINA KANNADA

    ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ತಂದೆ

    ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ತಂದೆ

    ಪುತ್ತೂರು ಸೆಪ್ಟೆಂಬರ್ 12: ಮಗನನ್ನು ಕತ್ತಿಯಿಂದ ಇರಿದ ನಂತರ ತಂದೆ ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪದ ಆಲಂಕಾರಿನಲ್ಲಿ ನಡೆದಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಆಲಂಕಾರು ಗ್ರಾಮದ ಪಟ್ಟೆಮಜಲು ನಿವಾಸಿ ರಾಜೀವ್ ಪೂಜಾರಿ (45) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
    ರಾಜೀವ್ ಪೂಜಾರಿ ಅವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ತನ್ನ ಸ್ವಂತ ಮಗ ರತನ್ ಗೆ ಕತ್ತಿಯಿಂದ ಇರಿದ ಬಳಿಕ ಇವರು ಮರ್ಮಾಂಗ ಕಡಿದು ಕುತ್ತಿಗೆ ಸೀಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಗಾಯಾಳು ರತನ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಡಬ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply