ಗಾಂಜಾ ಮಾರಾಟಗಾರನಿಂದ ಯುವಕನ ಮೇಲೆ ಹಲ್ಲೆ

ಮಂಗಳೂರು ಫೆಬ್ರವರಿ 22: ಗಾಂಜಾ ಮಾರಾಟಗಾರನೊಬ್ಬ ಯವಕನೋರ್ವನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು ಕುಪ್ಪೆಪದವು ನಿವಾಸಿ ಸುಲೈಮಾನ್ (28) ಎಂದು ಗುರುತಿಸಲಾಗಿದೆ.

ಹಲ್ಲೆ ನಡೆಸಿದ ಆರೋಪಿ ಹಂಝ ಇಂದು ಸಂಜೆ ಕುಪ್ಪೆಪದವಿನಲ್ಲಿ ಸುಲೈಮಾನ್ ಬೈಕ್ ಅಡ್ಡಹಾಕಿ ನೆಲಕ್ಕೆ ದೂಡಿ ಯರ್ರಾಬಿರ್ರಿ ಹಲ್ಲೆ ನಡೆಸಿದ್ದಾನೆ. ಏಕಾಏಕಿ ಹಲ್ಲೆ ನಡೆಸಿದ್ದರಿಂದ ಸುಲೈಮಾನ್ ತೀವ್ರ ಗಾಯಗೊಂಡಿದ್ದಾರೆ. ಮೈ-ಕೈಗೆ ಗುದ್ದಿ, ಕಾಲಿನಿಂದ ತುಳಿದು ತೀವ್ರ ಹಲ್ಲೆ ನಡೆಸಲಾಗಿದೆ.

ಹಲ್ಲೆ ಆರೋಪಿ ಹಂಝ ಕುಪ್ಪೆಪದವು ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಈ ಕುರಿತಂತೆ ಗಾಂಜಾ‌ ಮಾರಾಟದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಕ್ಕೆ ಈ ಹಲ್ಲೆ ನಡೆಸಿದ್ದಾನೆ ಎಂದು ಹೇಳಲಾಗಿದೆ.

ಈ ಹಿಂದೆ‌ ಸಾಕಷ್ಟು ದೂರು ನೀಡಿದ್ದರೂ ಪೊಲೀಸರು ತನಿಖೆ ನಡೆಸಿರಲಿಲ್ಲ, ಪ್ರಸ್ತುತ ಬಜ್ಪೆ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.

Facebook Comments

comments