LATEST NEWS
ಮುಂಬೈ – 20 ವರ್ಷದ ಯುವಕನಿಂದ ನಾಯಿ ಮೇಲೆ ಅತ್ಯಾಚಾರ
ಮುಂಬೈ ಮಾರ್ಚ್ 20: ಸಣ್ಣ ಮಕ್ಕಳಿಂದ ಹಿಡಿದು ವೃದ್ದೆಯವರೆಗೂ ಲೈಂಗಿಕ ದೌರ್ಜನ್ಯ ವೆಸಗುತ್ತಿದ್ದ ಕಾಮುಕರು ಈಗ ಮೂಕ ಪ್ರಾಣಿಗಳ ಮೇಲೂ ತಮ್ಮ ಕೌರ್ಯ ತೋರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ 20 ವರ್ಷದ ಯುವಕನೊಬ್ಬ ಶ್ವಾನದ ಮೇಲೆ ಅತ್ಯಾಚಾರವೆಸಗಿ ತನ್ನ ಕಾಮತೃಷೆ ತೀರಿಸಿಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಈ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿಯನ್ನು ತೌಫೀಕ್ ಅಹಮದ್ ಎಂದು ಗುರುತಿಸಲಾಗಿದೆ. ಸದ್ಯ ಈತನ ವಿರುದ್ಧ ಪ್ರಾಣಿ ರಕ್ಷಣಾ ಟ್ರಸ್ಟ್ ಮುಖ್ಯಸ್ಥೆ ಸವಿತಾ ಮಹಾಜನ್ ಅವರು ವಕೋಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತೌಫೀಕ್ ವಿರುದ್ಧ ಅನೈಸರ್ಗಿಕ ಲೈಂಗಿಕತೆ ನಡೆಸಿದ ಸಂಬಂಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ.
ಅದೇ ಪ್ರದೇಶದಲ್ಲಿ ಬ್ರೆಡ್ ಮಾರಿಕೊಂಡು ಜೀವನ ನಡೆಸುತ್ತಿದ್ದ ಆರೋಪಿ ತೌಫೀಕ್ ರಾತ್ರಿ ವೇಳೆ ಹೆಣ್ಣು ನಾಯಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ದೃಶ್ಯ ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇತ್ತ ತನ್ನ ಮೇಲೆ ಕೇಸ್ ದಾಖಲಾಗುತ್ತಿದ್ದಂತೆಯೇ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಸದ್ಯ ತೌಫೀಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.