Connect with us

    DAKSHINA KANNADA

    ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ತಂತಿ ತಗುಲಿ ಸಾವು….!!

    ಕಡಬ ಸೆಪ್ಟೆಂಬರ್ 07: ಮನೆಯ ಸಮೀಪ ಇದ್ದ ಮರದ ಕೊಂಬೆ ಕಡಿಯುವ ವೇಳೆ ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸಾವನಪ್ಪಿರುವ ಘಟನೆ ಕಡಬ ತಾಲೂಕಿನ ಕುಂತೂರು ಅನ್ನಡ್ಕದಲ್ಲಿ ನಡೆದಿದೆ.


    ಮೃತರನ್ನು ಕುಂತೂರು ಅನ್ನಡ್ಕ ಕಾಲಾಯಿಲ್ ನಿವಾಸಿ ಮನೋಜ್ (43) ಎಂದು ಗುರುತಿಸಲಾಗಿದೆ. ಮನೋಜ್ ಅವರು ಮರದ ಕೊಂಬೆ ಕಡಿಯುವಾಗ 33 ಕೆವಿ ವಿದ್ಯುತ್ ತಂತಿ ತಾಗಿ ಈ ಘಟನೆ ಸಂಭವಿಸಿದೆ. ಮನೋಜ್ ಮೃತದೇಹ ಮರದಲ್ಲೇ ನೇತಾಡುತ್ತಿತ್ತು. ಬಳಿಕ ಸ್ಥಳಕ್ಕೆ ಕಡಬ ಮೆಸ್ಕಾಂ ಎಇಇ ಸಜಿಕುಮಾರ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಘಟನೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply