ಮಂಗಳೂರು ಫೆಬ್ರವರಿ 09 : ಎಪಿಕೆ ಫೈಲ್ ಗಳನ್ನು(APK File) ಡೌನ್ಲೋಡ್ ಮಾಡಬೇಡಿ ಎಂದು ಎಷ್ಟೇ ಜಾಗೃತೆ ಮೂಡಿಸಿದರೂ ಜನ ಮಾತ್ರ ಮತ್ತೆ ಅದೇ ತಪ್ಪನ್ನು ಮಾಡಲು ಹೋಗುತ್ತಾರೆ. ಅಂತಹುದೇ ಒಂದು ಪ್ರಕರಣ ಮಂಗಳೂರಿನಲ್ಲಿ ನಡೆದಿದ್ದು, ಎಪಿಕೆ ಪೈಲ್ ಡೌನ್ಲೋಡ್ ಮಾಡಿ 10 ಲಕ್ಷ ಕಳೆದುಕೊಂಡಿದ್ದಾನೆ.

ದಿನಾಂಕ:05-02-2026 ರಂದು ಸಂಜೆ 5.44 ಗಂಟೆಗೆ 6294568603 ನೇ ನಂಬರಿನಿಂದ ಒಂದು APK ಲಿಂಕ್ ಬಂದಿದ್ದು ಅದನ್ನು ಫಿರ್ಯಾದಿದಾರರು ಡೌನ್ಲೋಡ್ ಮಾಡಿ ತನ್ನ ಮೊಬೈಲ್ ನಂಬರ್ ನಮೂದಿಸಿದ್ದಾನೆ. ಬಳಿಕ 8822379820 ನೇ ನಂಬರಿನಿಂದ ಪದೆ ಪದೆ ಪೋನ್ ಮಾಡಿ KYC ದಾಖಲಾತಿಗಳನ್ನು ಕೇಳಿದ್ದಾರೆ. ಆದರೆ ಯುವಕ ಯಾವುದೇ ದಾಖಲೆಗಳನ್ನು ನೀಡಿಲ್ಲ. ಆದರೂ ದಿನಾಂಕ: 06-02-2026 ರಂದು ರಾತ್ರಿ 9.11 ಗಂಟೆಯಿಂದ 9.27 ರ ಮಧ್ಯದಲ್ಲಿ ಯುವಕನ ಯೂನಿಯನ್ ಬ್ಯಾಂಕ್ ಪದವು ಶಾಖೆ ಖಾತೆಯಿಂದ ಸುಮಾರು ಒಟ್ಟು 10,00,000/- ಹಣ ಹಂತ ಹಂತವಾಗಿ ಕಟ್ ಆಗಿದೆ. ಇದೀಗ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.