Connect with us

    KARNATAKA

    ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿ ಕೆಲಸ ಕಳೆದುಕೊಂಡ ಆರೋಪಿ

    ಬೆಂಗಳೂರು ಜನವರಿ 07: ಇತ್ತೀಚೆಗೆ ಬಾರಿ ಸುದ್ದಿ ಮಾಡುತ್ತಿರುವ ಏರ್ ಇಂಡಿಯಾ ವಿಮಾನದಲ್ಲಿ ಮೂತ್ರ ವಿಸರ್ಜಿಸಿದ ಘಟನೆ ಯ ಆರೋಪಿ ಶಂಕರ್ ಮಿಶ್ರಾ ಅವರನ್ನು ಕಂಪನಿಯು ಕೆಲಸದಿಂದ ವಜಾಗೊಳಿಸಿದೆ. ವೆಲ್ಸ್​ ಫಾರ್ಗೋ ಉದ್ಯೋಗಿಗಳು ವೃತ್ತಿಪರ ಹಾಗೂ ವೈಯಕ್ತಿಕವಾಗಿ ಉತ್ತಮ ನಡವಳಿಕೆಯನ್ನು ಹೊಂದಿದ್ದಾರೆ, ಇವರ ಮೇಲಿನ ಆರೋಪಗಳು ಕಂಪನಿಗೆ ಕೆಟ್ಟ ಹೆಸರನ್ನು ತಂದಿದೆ ಹೀಗಾಗಿ ಅವರನ್ನು ಕೆಲಸದಿಂದ ವಜಾ ಮಾಡುತ್ತಿರುವುದಾಗಿ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.


    ಆರೋಪಿ ಶಂಕರ್ ನವೆಂಬರ್ 26 ರಂದು ನ್ಯೂಯಾರ್ಕ್​-ದೆಹಲಿ ಏರ್​ ಇಂಡಿಯಾ ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಬಳಿಕ ತನ್ನ ಮೇಲೆ ದೂರು ನೀಡಬೇಡಿ, ನನಗೆ ಹೆಂಡತಿ, ಮಕ್ಕಳು ಇದ್ದಾರೆ ಅವರ ಮೇಲೆ ಪರಿಣಾಮ ಬೀರುತ್ತೆ ಎಂದು  ಬೇಡಿಕೊಂಡಿದ್ದ. ಆದರೆ ಇತ್ತಿಚೆಗೆ ಸಂತ್ರಸ್ಥ ಮಹಿಳೆ ಏರ್ ಇಂಡಿಯಾ ಸಂಸ್ಥೆಗೆ ದೂರು ನೀಡಿದ್ದರು, ಈ ಹಿನ್ನಲೆ ಈ ಘಟನೆ ಸುದ್ದಿಯಲ್ಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply