LATEST NEWS
ಬಾವಿಗೆ ಬಿದ್ದ ಜೀವಂತ ನಾಗರ ಹಾವಿನ ರಕ್ಷಣೆ ಮಾಡಿದ ಯುವಕರು..ಮೈನವಿರೇಳಿಸುವ ಸಾಹಸದ ವಿಡಿಯೋ
ಯುವಕರ ಗುಂಪೊಂದು ಪ್ರಾಣದ ಹಂಗು ತೊರೆದು ನಾಗರಹಾವನ್ನು ರಕ್ಷಿಸುವ ಮೈನವಿರೇಳಿಸುವ ಸಾಹಸದ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಈ ವಿಡಿಯೋ ಹಳ್ಳಿಯ ಪರಿಸರದಲ್ಲಿ ತೆಗೆದಿರುವಂತೆ ಕಾಣಿಸಿದ್ದು, ಸ್ಥಳ ಯಾವುದೆಂದು ತಿಳಿದು ಬಂದಿಲ್ಲ. ಹಳ್ಳಿಯ ಜಮೀನಿನ ನಡುವೆ ಇರುವ ರಿಂಗ್ ಹಾಕಿದ್ದ ಈ ಬಾವಿಗೆ ನಾಗರಹಾವೊಂದು ಬಿದ್ದಿತ್ತು. ಮೇಲೆ ಬರಲು ಪ್ರಯತ್ನ ಪಟ್ಟಿದೆ. ಆದರೆ ಸಾಧ್ಯವಾಗದೇ ನೀರಿನಲ್ಲಿ ತಿರುಗಾಡುತ್ತಾ ಇತ್ತು. ಈ ಸಂದರ್ಭ ಇದನ್ನು ನೋಡಿತ್ತು. ಆಮೇಲೆ ಶುರುವಾಗಿದ್ದೇ ಹಾವಿನ ರಕ್ಷಣೆಯ ಕಾರ್ಯಾಚರಣೆ.
ಫೇಸ್‌ಬುಕ್ ಬಳಕೆದಾರರಾದ ರೋಜರ್ ಸ್ನಿಪ್ಸ್ ಎಂಬವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸುಮಾರು 4.31 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ ಆ ಯುವಕರ ಗುಂಪು ಹೇಗೆ ಪ್ರಾಣದ ಹಂಗು ತೊರೆದು ಜೀವಂತ ನಾಗರಹಾವನ್ನು ರಕ್ಷಣೆ ಮಾಡಿರುವ ರೀತಿ ಮೈನವಿರೇಳಿಸುವಂತಿದೆ.
ಒಬ್ಬ ಯುವಕ ಈ ಹಾವು ಇದ್ದ ಬಾವಿಗೆ ಇಳಿದು ಈಜಿದ್ದರು. ಸಾಕಷ್ಟು ಹೊತ್ತಿನ ಪ್ರಯತ್ನದ ಬಳಿಕ ಇವರೆಲ್ಲರು ಈ ಹಾವನ್ನು ರಕ್ಷಣೆ ಮಾಡಿದ್ದರು. ಈ ಹಾವಿನ ಜೀವ ಉಳಿಸಲು ಇವರೆಷ್ಟು ಕಷ್ಟಪಟ್ಟಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಅಚ್ಚರಿಯಿಂದಲೇ ಈ ವಿಡಿಯೋ ನೋಡಿದ್ದಾರೆ. ಜೊತೆಗೆ, ಯುವಕರ ಈ ಸಾಹಸವನ್ನೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.