ಮಂಗಳೂರು ಮಾರ್ಚ್ 28: 2026 ನೇ ಜನವರಿ ತಿಂಗಳಿನಲ್ಲಿ ಮಂಗಳೂರು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸ್ಪರ್ದೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣವಾದ ಉದಯವಾಣಿ ಫೇಸ್ ಬುಕ್ ಪುಟದಲ್ಲಿ ಅಪ್ಲೋಡ್ ಆಗಿದೆ.

ಈ ವಿಡಿಯೋ ಕೆಳಗೆ ಗಣೇಶ್ ಪ್ರಸಾದ್ ಎಂಬಾತನು ತನ್ನ ಅಕೌಂಟ್ ನಲ್ಲಿ ” ಮಕ್ಕಳ ತಲೆಯನ್ನು ಬ್ರೈನ್ ವಾಶ್ ಮಾಡಿ ನಾಳೆ ದೇಶಕ್ಕೆ ಬಾಂಬ್ ಇಡೋಕೆ ಕಳಿಸೋದು ಅಷ್ಟೇ” ಎಂದು ಪ್ರಚೋದನಕಾರಿಯಾಗಿ ಕಮೆಂಟ್ ಹಾಕಿದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣಾ ಅ.ಕ್ರ. 15/2026 ಕಲಂ 196 ಬಿ.ಎನ್.ಎಸ್ ಮತ್ತು 66 ಐಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ತನಿಖೆಯ ಸಮಯದಲ್ಲಿ ಗಣೇಶ್ ಪ್ರಸಾದ್ ಎಂಬ ಫೇಸ್ ಬುಕ್ ಖಾತೆಯಿಂದ ಕೋಮು ಪ್ರಚೋದಕ ಕಮೆಂಟ್ ಗಳನ್ನು ಹಾಕಿದ ವ್ಯಕ್ತಿಯು ಕಾಸರಗೋಡು ಜಿಲ್ಲೆ, ಮಂಜೇಶ್ವರದ ಗಣೇಶ್ ಪ್ರಸಾದ್ ( 41) ಎಂದು ತನಿಖೆಯಲ್ಲಿ ಕಂಡು ಬಂದಿದ್ದು, ದಿನಾಂಕ 27-03-2026 ರಂದು ಆರೋಪಿಯನ್ನು ಕಂಕನಾಡಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.