Connect with us

    LATEST NEWS

    ನಿದ್ರೆ ಮಂಪರಿನಲ್ಲಿ ಬಾವಿಗೆ ಬಿದ್ದು ಸಾವನಪ್ಪಿದ್ದ ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ

    ಉಳ್ಳಾಲ ಎಪ್ರಿಲ್ 16 : ಬಾವಿ ಕಟ್ಟೆಯ ಮೇಲೆ ಕುಳಿತಿದ್ದ ವ್ಯಕ್ತಿಯೊಬ್ಬರು ನಿದ್ರೆ ಮಂಪರಿನಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನಪ್ಪಿದ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.


    ಈ ಘಟನೆ ದೃಶ್ಯ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತರನ್ನು ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ (65) ಎಂದು ಗುರುತಿಸಲಾಗಿದೆ. ಇವರು ವಾಲ್ಟರ್ ತೊಕ್ಕೊಟ್ಟಿನ ಚರ್ಚ್ ಗೆ ಶನಿವಾರ ಸಂಜೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು.


    ರಾತ್ರಿ 7.23 ರ ಹೊತ್ತಿಗೆ ಮನೆಯಂಗಳದ‌ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದಾಗ ನಿದ್ರೆಯ ಮಂಪರಿನಿಂದ ಹಠಾತ್ ಆಗಿ ಬಾವಿಯೊಳಗೆ ಬಿದ್ದಿದ್ದಾರೆ.ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದರು. ತಲೆಗೆ ಗಂಭೀರವಾಗಿ ಏಟಾದ ಪರಿಣಾಮ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ,ಇಬ್ಬರು ಗಂಡು ಮಕ್ಕಳು ಇದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply