ವಿಟ್ಲ ಡಿಸೆಂಬರ್ 10: ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಸಮೀಪದ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದು ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಕರೋಪಾಡಿ ಗ್ರಾಮದ ಪದ್ಯಾನ ಗಡಿಭಾಗ ಎಂಬಲ್ಲಿ ಡಿಸೆಂಬರ್ 7 ರಂದು ಬೆಳಿಗ್ಗೆ ನಡೆದಿದೆ.


ಮೃತ ವ್ಯಕ್ತಿಯನ್ನು ನಾರಾಯಣ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಡಿ.7 ರಂದು ಬೆಳಿಗ್ಗೆ ಮನೆಯ ಎದುರುಗಡೆಯ ತೆಂಗಿನ ಮರದಿಂದ ಅಲ್ಯುಮಿನಿಯಂ ಕೊಕ್ಕೆಯಿಂದ ತೆಂಗಿನ ಕಾಯಿ ಕೀಳುತ್ತಿದ್ದ ವೇಳೆ ಕೊಕ್ಕೆ ಆಕಸ್ಮಿಕವಾಗಿ ಪಕ್ಕದಲ್ಲಿರುವ ಎಚ್ ಟಿ ಲೈನ್ ವಿದ್ಯುತ್ ತಂತಿಗೆ ತಗುಲಿ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಇವರನ್ನು ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದಾರೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

Share Information