ಮಂಗಳೂರು ಕಾರ್ ಸ್ಟ್ರೀಟ್ ನಲ್ಲಿ ಒಂದು ಕೋಟಿ ನಗದು ಸಹಿತ ವ್ಯಕ್ತಿಯೊಬ್ಬ ಪೊಲೀಸರ ವಶಕ್ಕೆ

ಮಂಗಳೂರು ಮೇ 17: ಒಂದು ಕೋಟಿ ನಗದು ಸಹಿತ ವ್ಯಕ್ತಿಯೊಬ್ಬನನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಂಗಳೂರಿನ ರಥಬೀದಿಯಲ್ಲಿ ಕಾರ್ಯಾಚರಣೆ ನಡೆಸಿದ ಬಂದರು ಪೊಲೀಸರು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ಮಂಜುನಾಥ್(56) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ.

ಮಂಜುನಾಥ ಜುವೆಲ್ಲರಿ ವಹಿವಾಟಿಗೆಂದು ಅಕ್ರಮವಾಗಿ ನಗದು ಹಣವನ್ನು ತಂದಿದ್ದ ಎಂದು ಹೇಳಲಾಗಿದ್ದು, ಕೋರ್ಟಿಗೆ ಸೂಕ್ತ ದಾಖಲಾತಿ ಹಾಜರುಪಡಿಸಿ ಹಣ ಬಿಡುಗಡೆಗೆ ಪೊಲೀಸರು ಸೂಚನೆ ನೀಡಿದ್ದಾರೆ. ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5 Shares

Facebook Comments

comments