Connect with us

LATEST NEWS

ಯುವತಿಗೆ ಗುಪ್ತಾಂಗ ತೋರಿಸಿದ ವಿಕೃತಕಾಮಿ ಆರೆಸ್ಟ್

ಮಂಗಳೂರು ಎಪ್ರಿಲ್ 13:ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯವತಿಯೊಬ್ಬಳಿಗೆ ಗುಪ್ತಾಂಗ ತೋರಿಸಿದ ವಿಕೃತ ಕಾಮಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


ಬಂಧಿತನನ್ನು ಪಿಲಾರು ನಿವಾಸಿ ಮಹಮ್ಮದ್ ಆರೀಫ್ (27) ಎಂದು ಗುರುತಿಸಲಾಗಿದ್ದು, ಆರೋಪಿ ಕುತ್ತಾರಿನ ವಿಷ್ಣುಮೂರ್ತಿ ರಸ್ತೆಯ ಮೂಲಕ ಕುತ್ತಾರು ಜಂಕ್ಷನ್ ಕಡೆಗೆ ಕೆಲಸಕ್ಕೆಂದು ತೆರಳುತ್ತಿದ್ದ ಯುವತಿಗೆ ತನ್ನ ಪ್ಯಾಂಟ್ ಬಿಚ್ಚಿ ಗುಪ್ತಾಂಗ ತೋರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈತನ ವರ್ತನೆಯಿಂದ ಹೆದರಿದ ಯುವತಿ ಹತ್ತಿರದ ಟೈಲರ್ ಅಂಗಡಿಗೆ ಹೋಗಿ ಸಹಾಯ ಯಾಚಿಸಿದ್ದಾಳೆ.

ಕೂಡಲೇ ಅಲ್ಲಿ ನೆರೆದಿದ್ದ ಜನರು ಎಚ್ಚೆತ್ತಾಗ ವಿಕೃತಕಾಮಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಕೃತ್ಯ ಎಸಗಿದ ಆರೋಪಿಯ ಫೋಟೊವನ್ನು ಅಲ್ಲೆ ಇದ್ದ ಕಾರು ಚಾಲಕರೊಬ್ಬರು ಸೆರೆ ಹಿಡಿದಿದ್ದಾರೆ. ಈ ಘಟನೆ ಕುರಿತಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ ಒಂದು ಗಂಟೆಯೊಳಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಈ ಹಿಂದೆಯೂ ಮಹಿಳೆಯರ ಬಳಿ ಹೋಗಿ ಇದೇ ರೀತಿ ಕೃತ್ಯವನ್ನು ಎಸಗಿದ್ದ ಎನ್ನಲಾಗ್ತಿದೆ.