LATEST NEWS
ಎನ್ಐಟಿಕೆ ಬೀಚ್ ನಲ್ಲಿ ಯುವತಿ ಮೇಲೆ ಅತ್ಯಾಚಾರ – ಆರೋಪಿ ಅರೆಸ್ಟ್
ಮಂಗಳೂರು, ಆಗಸ್ಟ್ 01: ಸುರತ್ಕಲ್ ಎನ್ಐಟಿಕೆ ಸಮೀಪದ ಬೀಚ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ವೆಸಗಿ ಅದನ್ನು ಚಿತ್ರೀಕರಿಸಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಲಾರಿ ಚಾಲಕ ಮುನಾಝ್ ಎಂದು ಗುರುತಿಸಲಾಗಿದ್ದು, ಜುಲೈ 27 ರಂದು ಈ ಘಟನೆ ನಡೆದಿದೆ. ಅತ್ಯಾಚಾರ ನಡೆಸಿದ್ದಾನೆ. ಯುವತಿಯು ಗೆಳೆಯನ ಜೊತೆ ಕಡಲ ಕಿನಾರೆಗೆ ತೆರಳಿದ್ದಳು. ಗೆಳೆಯನ ಜೊತೆ ಅನ್ಯೋನ್ಯವಾಗಿದ್ದ ದೃಶ್ಯವನ್ನು ಮೊದಲು ಸೆರೆ ಹಿಡಿದಿದ್ದ ಆರೋಪಿ, ಅದನ್ನು ಯುವತಿಗೆ ತೋರಿಸಿದ್ದ. ಆಕೆ ಜೊತೆ ಇದ್ದ ಗೆಳೆಯನನ್ನು ಸ್ಥಳದಿಂದ ಓಡಿಸಿ ನಂತರ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಇದೇ ರೀತಿ ಬೇರೆ ಯುವತಿಯರಿಗೂ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹಾಗಾಗಿ ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಿದ ಬಳಿಕ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ. ಆತನ ಮೊಬೈಲ್ ಗಳನ್ನೂ ವಶಕ್ಕೆ ಪಡೆದಿದ್ದೇವೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
You must be logged in to post a comment Login