Connect with us

LATEST NEWS

ಅಪ್ರಾಪ್ತ ಬಾಲಕಿಯ ಮುಂದೆ ಜಿಪ್ ಜಾರಿಸಿದ ವಿಕೃತಕಾಮಿ ಪೊಲೀಸ್ ವಶಕ್ಕೆ

ಉಡುಪಿ ಎಪ್ರಿಲ್ 10: ಅಪ್ರಾಪ್ತ ಬಾಲಕಿಯ ಮುಂದೆ ಜಿಪ್ ಜಾರಿಸಿ ಖಾಸಗಿ ಅಂಗ ತೋರಿಸಿದ ವಿಕೃತಕಾಮಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಬಜಗೋಳಿಯ ದಿಡಿಂಬಿರಿ ಎಂಬಲ್ಲಿ ನಡೆದಿದೆ.


ವಿಕೃತಕಾಮಿ ಆರೋಪಿಯನ್ನು ನಾರಾವಿಯ ಅಬೂಬಕ್ಕರ್ ಸಿದ್ದಿಕ್ ಎಂದು ಗುರುತಿಸಲಾಗಿದ್ದು, ಬಾಲಕಿಯನ್ನು ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಖಾಸಗಿ ಅಂಗ ತೋರಿಸಿದ್ದನೆ ಆರೋಪಿಸಲಾಗಿದ್ದು, ಸ್ಥಳದಲ್ಲೇ ಇದ್ದ ಸಾರ್ವಜನಿಕರು ಕೂಡಲೇ ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.