ಮಹಾರಾಷ್ಟ್ರದ ಕಡಲ ತೀರದಲ್ಲಿ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ನ ಅವಶೇಷ ಪತ್ತೆ ?

ಉಡುಪಿ ಫೆಬ್ರವರಿ 8: ಮಹಾರಾಷ್ಟ್ರದ ಕಡಲ ತೀರದಲ್ಲಿ ಮೀನುಗಾರಿಕಾ ದೋಣಿಯೊಂದು ಪತ್ತೆಯಾಗಿದ್ದು, ಡಿಸೆಂಬರ್ 15 ರಂದು ಮಲ್ಪೆಯಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟ್ ನ ಬಿಡಿ ಭಾಗಗಳಾಗಿರಬಹುದೆಂಬ ಸಂಶಯ ವ್ಯಕ್ತವಾಗಿದೆ.

ಡಿಸೆಂಬರ್ 15 ರಂದು ಮಲ್ಪೆಯಿಂದ ಮಹಾರಾಷ್ಟ್ರದ ರತ್ನಗಿರಿಗೆ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎನ್ನುವ ಮೀನುಗಾರಿಕಾ ಬೋಟ್ ಸಮೇತ ಅದರಲ್ಲಿದ್ದ ರಾಜ್ಯದ 7 ಮೀನುಗಾರರು ನಾಪತ್ತೆಯಾಗಿದ್ದರು. ನಾಪತ್ತೆಯಾದವರ ಪತ್ತೆಗಾಗಿ ರಾಜ್ಯ ಸರಕಾರ, ಕೇಂದ್ರ ಸರಕಾರ ಪ್ರಯತ್ನ ಪಟ್ಟರು ಇಲ್ಲಿಯವರೆಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ. ಈ ನಡುವೆ ಕಡಲ ತೀರದಲ್ಲಿ ಮುಳುಗಿದ್ದ ದೋಣಿಯ ಬಿಡಿ ಭಾಗವು ಮಹಾರಾಷ್ಟ್ರದ ರತ್ನಗಿರಿ ಬಳಿ ಪತ್ತೆಯಾಗಿದ್ದು, ನಾಪತ್ತೆಯಾದ ಮಲ್ಪೆ ಮೂಲದ ಬೋಟಿನ ಅವಶೇಷ ಎನ್ನುವ ಶಂಕೆ ವ್ಯಕ್ತವಾಗಿದೆ.

ರತ್ನಗಿರಿ ಬಳಿ ಮೀನುಗಾರಿಕೆಗೆ ತೆರಳಿದ್ದ ಅಂಕೋಲಾ ತಾಲೂಕಿನ ಬೇಲೆಕೇರಿ ಮೂಲದ ಮೀನುಗಾರರ ಕಣ್ಣಿಗೆ ಈ ಅವಶೇಷಗಳು ಕಾಣಿಸಿದೆ. ಹೀಗಾಗಿ ಅವರು ಈ ಅವಶೇಷ ಮಲ್ಪೆ ಮೂಲದ ಬೋಟಿನದ್ದಾಗಿರಬಹುದೆಂದು ಶಂಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ಮೀನುಗಾರರು ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Facebook Comments

comments