Connect with us

    LATEST NEWS

    ಮಲ್ಪೆ ಬೀಚ್ ನಲ್ಲಿ ಆತ್ನಹತ್ಯೆಗೆ ಯತ್ನಿಸಿದ ಮಹಿಳೆ ರಕ್ಷಣೆ

    ಉಡುಪಿ ಜೂನ್ 27: ಮಲ್ಪೆ ಬೀಚ್ ನಲ್ಲಿ ಸಮದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರನ್ನು ಲೈಫ್ ಗಾರ್ಡ್ ತಂಡ ರಕ್ಷಿಸಿದೆ.

    ಪುಣೆ ಮೂಲದ 45 ವರ್ಷದ ಮಹಿಳೆಯೊಬ್ಬರು ತನ್ನ ಮಗನೊಂದಿಗೆ ಮಲ್ಪೆ ಬೀಚ್‌ಗೆ ಬಂದಿದ್ದು, ಅಲ್ಲಿ ಆತ್ಮಹತ್ಯೆ ಮಾಡುವ ಉದ್ದೇಶದಿಂದ ಆ ಮಹಿಳೆ ಸಮುದ್ರದ ನೀರಿನತ್ತ ಓಡುತ್ತಿದ್ದರೆನ್ನಲಾಗಿದೆ.

    ಇದನ್ನು ಸ್ಥಳದಲ್ಲಿದ್ದ ಜೀವರಕ್ಷಕ ದಳದವರು ಗಮನಿಸಿದ್ದು, ತಕ್ಷಣವೇ ಆ ಮಹಿಳೆಯನ್ನು ರಕ್ಷಿಸಿ ತೀರಕ್ಕೆ ಕರೆತಂದರು. ಆದರೆ ಮತ್ತೆ ಅದೇ ಪ್ರಯತ್ನ ಮುಂದುವರಿಸಿದಾಗ ಜೀವರಕ್ಷಕ ತಂಡದವರು ಮಗನನ್ನು ಮತ್ತು ಮಹಿಳೆಯನ್ನು ಮಲ್ಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply