ಉಡುಪಿ ಸೆಪ್ಟೆಂಬರ್ 23:ಮಳೆಗಾಲದಲ್ಲಿ ಸಮುದ್ರದ ಅಬ್ಬರ ಜೋರಾಗಿರುವ ಕಾರಣ ಪ್ರವಾಸಿಗರಿಗೆ ಮಲ್ಪೆ ಸಮುದ್ರ ತೀರಕ್ಕೆ ತೆರಳದಂತೆ ಹೇರಲಾಗಿದ್ದ ನಿಷೇಧವನ್ನು ಇದೀಗ ತೆಗೆಯಲಾಗಿದ್ದು. ಮಲ್ಪೆ ಬೀಚ್ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಕಡಲಿಗಿಳಿಯದಂತೆ ಬೀಚ್‌ನ ಉದ್ದಕ್ಕೂ ಹಾಕಲಾಗಿದ್ದ ತಡೆಬೇಲಿಯನ್ನು ತೆರವುಗೊಳಿಸಲಾಗಿದೆ. ಜಲ ಕ್ರೀಡೆಗಳು ಆರಂಭಗೊಂಡಿವೆ.


ಸೋಮವಾರ ಮಲ್ಪೆ ಬೀಚ್‌ನಲ್ಲಿ ವಾಟರ್‌ ಸ್ಪೋಟ್ಸ್‌ ಗಳಾದ ಜೆಸ್ಕಿ, ಪ್ಯಾರಸೈಲಿಂಗ್‌, ಬನಾನ ರೈಡ್‌, ಬಂಪಿ ರೈಡ್‌, ಝೋರ್ಬಿಂಗ್‌, ಬೋಟ್‌ ರೌಂಡ್‌ ಸೇರಿದಂತೆ ಇನ್ನಿತರ ಚಟುವಟಿಕೆಗಳು ಆರಂಭಗೊಂಡಿದೆ.
ಮಲ್ಪೆ ಬೀಚನ್ನು ಪ್ರವಾಸಿಗರಿಗೆ ಮುಕ್ತಗೊಳಿಸಲಾಗಿದೆ, ಜಲ ಕ್ರೀಡೆಗೂ ಅವಕಾಶ ನೀಡಲಾಗಿದೆ. ಆದರೆ, ಕಡಲಿನ ಜತೆ ದುಸ್ಸಾಹಸಕ್ಕಿಳಿಯದೆ ಎಲ್ಲರೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮನವಿ ಮಾಡಿದ್ದಾರೆ.

ಮಲ್ಪೆ ಬೀಚ್ ಪ್ರವಾಸಿಗರ ಭೇಟಿಗೆ ಮುಕ್ತವಾಗಿದ್ದು, ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಪ್ರವಾಸಿಗರ ನಿರ್ಬಂಧ ತೆರವುಗೊಳಿಸುವ ಬಗ್ಗೆ ಸೈಂಟ್ ಮೇರಿಸ್ ಐಲ್ಯಾಂಡ್ ಗೆ ಜಿಲ್ಲಾಧಿಕಾರಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share Information