Connect with us

LATEST NEWS

ವಿತರಣೆ ಆಗದೆ ಹಾಗೆ ಉಳಿದ ಮಲೇಷ್ಯಾದಿಂದ ಬಂದಿದ್ದ 75,400 ಟನ್ ಮರಳು

ಮಂಗಳೂರು ಡಿಸೆಂಬರ್ 9: ಕಾಮಾಗಾರಿ ನಡೆಸಲು ಮರಳು ಕೊರತೆಯಾದ ಹಿನ್ನಲೆ ಕೆಲ ವರ್ಷಗಳ ಹಿಂದೆ ಮಲೇಷ್ಯಾದಿಂದ ತರಿಸಿದ್ದ ಸುಮಾರು 75,400 ಟನ್ ಮರಳು ವಿತರಣೆ ಆಗದೆ ಹಾಗೆ ನವಮಂಗಳೂರು ಬಂದರಿನಲ್ಲಿ ಉಳಿದಿದೆ.


ಈ ಬಗ್ಗೆ ಮಾಹಿತಿ ನಿಡಿದ ದಕ್ಷಿಣಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಅವರು ಎನ್‌ಎಂಪಿಎ ಆವರಣದಲ್ಲಿ 75,400 ಟನ್ ಮರಳು ಸಂಗ್ರಹ ಇರುವ ವಿಷಯ ನನಗೂ ಅಚ್ಚರಿ ಮೂಡಿಸಿದೆ. ಇದು ಎಂ–ಸ್ಯಾಂಡ್ ಅಲ್ಲವಾಗಿದ್ದರೂ, ಅದಕ್ಕೆ ಸಮಾನ ಉತ್ತಮ ಗುಣಮಟ್ಟ ಹೊಂದಿದೆ. 10 ಟನ್‍ಗೆ ₹ 10 ಸಾವಿರ ದರಕ್ಕೆ ಖರೀದಿದಾರರಿಗೆ ಪೂರೈಕೆ ಮಾಡಲಾಗುವುದು. ಇದಲ್ಲದೆ, ಜಿಲ್ಲೆಯ ವಿವಿಧ ಕಡೆಗಳಲ್ಲಿ ವಶಪಡಿಸಿಕೊಂಡಿರುವ 1,000 ಟನ್ ಮರಳು ಲಭ್ಯವಿದೆ. ಆ ಮರಳನ್ನು ಕೂಡಾ ಲೋಡ್ ಒಂದಕ್ಕೆ ₹ 7,000 ದರದಲ್ಲಿ ನೀಡಲಾಗುವುದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಮಾಹಿತಿ ನೀಡಿದರು.

ನಂತರ ಲಿಖಿತ ಹೇಳಿಕೆ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ, ಆಮದು ಮರಳು ಪಡೆಯಲು ಆಕರ್ ಎಂಟರ್‌ಪ್ರೈಸಸ್, ನವಮಂಗಳೂರು ಬಂದರು, ಪಣಂಬೂರು (9113907389) ಇಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಆಕರ್ ಎಂಟರ್‌ಪ್ರೈಸಸ್ ಸಂಸ್ಥೆಯು ಮಲೇಷ್ಯಾದಿಂದ 1 ಲಕ್ಷ ಟನ್ ಮರಳನ್ನು ಆಮದು ಮಾಡಿಕೊಂಡು ನವಮಂಗಳೂರು ಬಂದರಿನಲ್ಲಿ ದಾಸ್ತಾನು ಇರಿಸಿತ್ತು. ಇದಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಗೆ 2019ರ ಫೆ. 11ರಂದು ನೀಡಿದ ಮಧ್ಯಂತರ ಆದೇಶದಂತೆ, ಹೊರ ರಾಜ್ಯಗಳಿಗೆ ಮರಳು ಸಾಗಣೆ ಪರವಾನಗಿ ವಿತರಿಸಲು ಕ್ರಮವಹಿಸುವಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿರ್ದೇಶಕರು 2019ರ ಏ. 12ರಂದು ಪತ್ರದಲ್ಲಿ ತಿಳಿಸಿದ್ದಾರೆ. ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 2019 ಜೂನ್ 11ರಂದು ಎನ್‌ಎಂಪಿಎದಲ್ಲಿ ದಾಸ್ತಾನು ಮಾಡಿರುವ 1 ಲಕ್ಷ ಟನ್ ಮರಳನ್ನು ಹೊರ ರಾಜ್ಯಗಳಿಗೆ ಸಾಗಣೆ ಮಾಡಲು ಅನುಮತಿ ನೀಡಿತ್ತು. ಆ ಪೈಕಿ 75,400 ಟನ್‌ ಮರಳು ಉಳಿದಿದೆ ಎಂದು ವಿವರಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *