Connect with us

    FILM

    ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟಿ ಮಲೈಕಾ ಅರೋರಾ ತಂದೆ ಅನಿಲ್ ಅರೋರಾ

    ಮುಂಬೈ ಸೆಪ್ಟೆಂಬರ್ 11: ಬಾಲಿವುಡ್ ನ ಖ್ಯಾತ ನಟಿ ಮಲೈಕಾ ಅರೋರಾ ಅವರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಅರೋರಾ ಮುಂಜಾನೆ ತಮ್ಮ ಮನೆಯ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.


    ಮಲೈಕಾ ಅವರ ಬಾಂದ್ರಾ ನಿವಾಸಕ್ಕೆ ಹಲವು ಪೊಲೀಸರು ತೆರಳಿದ್ದು, ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮಲೈಕಾ ತಂದೆ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆ ನಡೆದಾಗ ಮಲೈಕಾ ಅರೋರಾ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರು ಪುಣೆಯಲ್ಲಿ ಇದ್ದು. ಘಟನೆಯ ಬಗ್ಗೆ ಮಾಹಿತಿ ಪಡೆದ ಅವರು ಇದೀಗ ಮುಂಬೈಗೆ ತೆರಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply