ಮುಂಬೈ: ಎರಡು ಟ್ರಕ್ ಗಳ ನಡುವೆ ಕಾರೊಂದು ಸಿಲುಕಿ ಅಪ್ಪಚ್ಚಿಯಾದ ಪರಿಣಾಮ 8 ಮಂದಿ ಸಾವನಪ್ಪಿದ ಘಟನೆ ಪುಣೆಯ ನವಲೆ ಸೇತುವೆ ಪ್ರದೇಶದಲ್ಲಿ ನಡೆದಿದೆ. ಅಪಘಾತದಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.

ಟ್ರಕ್ ಡಿಕ್ಕಿ ಹೊಡೆದ ಬೆನ್ನಲ್ಲೇ 2-3 ಭಾರೀ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವಲಯ 3 ಪುಣೆ ನಗರ ಪೊಲೀಸ್ ಡಿಸಿಪಿ ಸಂಭಾಜಿ ಕದಮ್ ತಿಳಿಸಿದ್ದಾರೆ.

ಮುಂಬೈ- ಬೆಂಗಳೂರು ಹೆದ್ದಾರಿಯ ಮೂಲಕ ಸತಾರಾದಿಂದ ಮುಂಬೈಗೆ ವೇಗವಾಗಿ ಹೋಗುತ್ತಿದ್ದ ಟ್ರಕ್ ಸಂಜೆ 5.30 ರ ಸುಮಾರಿಗೆ ಬ್ರೇಕ್ ವೈಫಲ್ಯದಿಂದಾಗಿ ನವಲೆ ಸೇತುವೆಯ ಇಳಿಜಾರಿನಲ್ಲಿ ಒಂದು ಕಾರು ಸೇರಿದಂತೆ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಮತ್ತು ಅದೇ ಮಾರ್ಗದಲ್ಲಿ ಮುಂದೆ ಸಾಗುತ್ತಿದ್ದ ಕಂಟೇನರ್ ನಡುವೆ ಸಿಲುಕಿಕೊಂಡ ನಂತರ ಬೆಂಕಿಗಾಹುತಿಯಾಗಿದೆ.



