Connect with us

LATEST NEWS

ನಂತೂರಿನಲ್ಲಿ LPG ಟ್ಯಾಂಕರ್‌ ಅಡಿಗೆ ಬಿದ್ದು ವಿಧ್ಯಾರ್ಥಿ ಸಾವು

ನಂತೂರಿನಲ್ಲಿ LPG ಟ್ಯಾಂಕರ್‌ ಅಡಿಗೆ ಬಿದ್ದು ವಿಧ್ಯಾರ್ಥಿ ಸಾವು

ಮಂಗಳೂರು ಫೆಬ್ರವರಿ 13: ರಾಷ್ಟ್ರೀಯ ಹೆದ್ದಾರಿ 66ರ ನಂತೂರಿನಲ್ಲಿ ಭೀಕರ ರಸ್ತೆ ಅವಘಡ ಸಂಭವಿಸಿದ್ದು, ಎಲ್ ಪಿಜಿ ಟ್ಯಾಂಕರ್ ಬೈಕನ್ ಹಿಂಬದಿಗೆ ಗುದ್ದಿದ ಪರಿಣಾಮ ಬೈಕ್‌ ಸವಾರಿ ಮಾಡುತ್ತಿದ್ದ ವಿಧ್ಯಾರ್ಥಿ ಟ್ಯಾಂಕರ್‌ ಅಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ.

ಮೃತನನ್ನು ಮಣ್ಣಗುಡ್ಡೆ ನಿವಾಸಿ ಬೆಸೆಂಟ್ ಕಾಲೇಜಿನ ವಿಧ್ಯಾರ್ಥಿ ಕಾರ್ತಿಕ್ ಮಲ್ಯ ಎಂದು ಗುರುತಿಸಲಾಗಿದ್ದು, ಎಲ್ ಪಿಜಿ ಬುಲೆಟ್ ಟ್ಯಾಂಕರ್ ಕದ್ರಿ ಕೆಪಿಟಿ ಕಡೆಯಿಂದ ನಂತೂರು ವೃತ್ತದವರೆಗೆ ಸಾಗುತ್ತಿದ್ದಾಗ ಬೈಕ್ ಸವಾರ ಎಡಬದಿಯಿಂದ ವಾಹನ ಚಲಾಯಿಸಲು ಹೋಗಿ ನಿಯಂತ್ರಣ ತಪ್ಪಿ ಟ್ಯಾಂಕರ್ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾನೆ.

ಬೈಕ್ ಸವಾರನ ಅಜಾಗರೂಕತೆಯ ವಾಹನ ಚಲಾವಣೆಯೇ ಅಪಘಾತಕ್ಕೆ ಕಾರಣವೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮಂಗಳೂರು ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Facebook Comments

comments