ಬಳ್ಳಾರಿ, ಫೆಬ್ರವರಿ 18: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಂಗಳಮುಖಿ ಹಾಗೂ ಆಕೆಯ ಪ್ರೀಯಕರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಳ್ಳಾರಿಯ ಡೈರಿ ಕ್ರಾಸ್ ಬಳಿ ನಡೆದಿದೆ.

ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮಲ್ಪನಗುಡಿ ಗ್ರಾಮದ ಯುವಕ ಶೇಖರ್ ಅಲಿಯಾಸ್ ಮಣಿ (31) ಹಾಗೂ ಬಳ್ಳಾರಿ ತಾಲೂಕಿನ ಚಾಗನೂರ ಗ್ರಾಮದ ಮಂಗಳಮುಖಿ ಸುಹಾಸಿನಿ (29) ನೇಣು ಬೀಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಇವರಿಬ್ಬರು ಕಳೆದ 6 ವರ್ಷಗಳಿಂದ ಬಳ್ಳಾರಿಯ ಡೈರಿ ಕ್ರಾಸ್ ಬಳಿ ಬಾಡಿಗೆ ಮನೆಯಲ್ಲಿ ವಾಸ ಮಾಡ್ತ ಇದ್ದರು. ವೃತ್ತಿಯಲ್ಲಿ ಆಟೋ ಚಾಲಕನಾಗಿ ದುಡಿಯುತ್ತಿದ್ದ ಮಣಿ ಸುಹಾಸಿನಿ ಮಂಗಳಮುಖಿ ಎಂದು ತಿಳಿದರೂ ಆಕೆಯನ್ನು ಶೇಖರ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಬಳ್ಳಾರಿ ಬಿಮ್ಸ್ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



