Connect with us

LATEST NEWS

ಜೆ.ಆರ್ ಲೋಬೋ ಅವರ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಪಂಪ್ ವೆಲ್ ಸರ್ಕಲ್ ಕಾಮಗಾರಿ ವಿಳಂಬಕ್ಕೆ ಕಾರಣ- ನಳಿನ್

ಜೆ.ಆರ್ ಲೋಬೋ ಅವರ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಪಂಪ್ ವೆಲ್ ಸರ್ಕಲ್ ಕಾಮಗಾರಿ ವಿಳಂಬಕ್ಕೆ ಕಾರಣ- ನಳಿನ್

ಮಂಗಳೂರು ಫೆಬ್ರವರಿ 27: ಮಂಗಳೂರಿನ ಹೃದಯಭಾಗದಲ್ಲಿರುವ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು ಅಮೆಗತಿಯಲ್ಲಿ ಸಾಗುತ್ತಿರುವ ಪಂಪ್ ವೆಲ್ ಪ್ಲೈಓವರ್ ಕಾಮಗಾರಿ ವಿಳಂಬಕ್ಕೆ ಅಂದಿನ ಕಾಂಗ್ರೇಸ್ ಶಾಸಕರಾದ ಜೆ.ಆರ್ ಲೋಬೋ ಹಾಗೂ ಅಂದಿನ ಜಿಲ್ಲಾಧಿಕಾರಿ ಇಬ್ರಾಹಿಂ ಕಾರಣ ಎಂದು ದೂರಿದ್ದಾರೆ.

ಬಿಜೆಪಿ ಹಮ್ಮಿಕೊಂಡಿದ್ದ ಕಮಲಜ್ಯೋತಿ ಅಭಿಯಾನದ ಮತ್ತೊಮ್ಮೆ ಮೋದಿ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯ ಮಾಡಲು ನಮಗೂ ಬರುತ್ತೆ ಆದರೆ ಜನರಿಗೆ ತೊಂದರೆ ಕೊಟ್ಟು ಕೀಳು ಮಟ್ಟದ ರಾಜಕೀಯ ಮಾಡಬಾರದು.

ಕಳೆದ ಆನೇಕ ತಿಂಗಳುಗಳಿಂದ ಪಂಪ್‌ ವೆಲ್ ಮೇಲ್ಸೇತುವೆ ಕಾಮಾರಿ ವಿಳಂಬದ ಕುರಿತು ತನ್ನ ವಿರುದ್ದ ಟೀಕೆಗಳು ಬರುತ್ತಿವೆ. ಆದರೆ ಈ ಪಂಪ್ ವೆಲ್ ಕಾಮಾಗಾರಿ ನಿಧಾನಿಸಲು ತಾನು ಕಾರಣನಲ್ಲ ಬದಲಿಗೆ ಅಂದಿನ ಕಾಂಗ್ರೆಸ್ ಶಾಸಕರಾದ ಜೆ. ಆರ್. ಲೊಬೋ ಮತ್ತು ಅಂದಿನ ಜಿಲ್ಲಾಧಿಕಾರಿಯಾದ ಇಬ್ರಾಹಿಂ ಅವರು. ಅವರ ಓಟ್ ಬ್ಯಾಂಕ್ ಪಾಲಿಟಿಕ್ಸ್‌ ನಲ್ಲಿ ಕಾಮಗಾರಿ ವಿಳಂಬವಾಗಿದೆ ಎಂದು ವಾಗ್ದಾಳಿ ನಡೆಸಿದರು.

Video…