ಜಂಗಲ್ ಸಫಾರಿಗೆ ಹೋದವರನ್ನು ಬೆನ್ನಟ್ಟಿದ ಸಿಂಹ

ಬಳ್ಳಾರಿ ಅಕ್ಟೋಬರ್ 11: ಜಂಗಲ್ ಸಫಾರಿಗೆ ಹೋದ ಜನರ ಜೀಪನ್ನು ಸಿಂಹವೊಂದು ಬೆನ್ನಟ್ಟಿದ್ದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ಕಮಲಾಪುರದ ಬಳಿ ಇರುವ ಅಟಲ್ ಬಿಹಾರ ವಾಜಪೇಯಿ ಜ್ಯೂಯಾಲಾಜಿಕಲ್ ಉದ್ಯಾನವನದಲ್ಲಿ ಈ ಘಟನೆ ನಡೆದಿದೆ.

ಉದ್ಯಾನವನದಲ್ಲಿ ಸಫಾರಿಗೆ ಹೋದ ಪ್ರವಾಸಿಗಳ ಜೀಪನ್ನು ಬೆನ್ನಟ್ಟಿದ ಕೇಸರಿ ಹೆಸರಿನ ಸಿಂಹ ಅಟ್ಯಾಕ್ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ಜೀಪ್ ನಲ್ಲಿ ಇದ್ದ ಪ್ರವಾಸಿಗರು ಸಫಾರಿ ಸಾಕು ನಮಗೆ ಬಿಟ್ಟುಬಿಡಿ ಎಂದು ಗೋಗರೆದಿದ್ದಾರೆ. ಸಿಂಹ ಹಿಂಬಾಲಿಸುವ ದೃಶ್ಯ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

VIDEO