Connect with us

    FILM

    ಕಾಂಚನಾ-3 ನಟಿ ಅಲೆಕ್ಸಾಂಡ್ರಾ ಶವ ಪತ್ತೆ

    ಗೋವಾ : ತಮಿಳು ಚಿತ್ರನಟಿ , ರಷ್ಯಾ ಮಾಡೆಲ್ ಅಲೆಕ್ಸಾಂಡ್ರಾ ಗೋವಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.


    ತಮಿಳು ನಟ ರಾಘವ ಲಾರೆನ್ಸ್ ಮುಖ್ಯ ಪಾತ್ರದಲ್ಲಿ ನಟಿಸಿದ ತಮಿಳು ಚಿತ್ರ ಕಾಂಚನಾ 3 ರಲ್ಲಿ ನಟಿಸಿ ಹೆಚ್ಚು ಹೆಸರು ವಾಸಿಯಾಗಿದ್ದರು.

    ಉತ್ತರ ಗೋವಾದ ಪಟ್ಟಣವೊಂದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಲೆಕ್ಸಾಂಡ್ರಾ ಮೃತದೇಹ ಮನೆಯಲ್ಲಿ ಪತ್ತೆಯಾಗಿದ್ದು, ಆಕೆಯ ನೆರೆಹೊರೆ ಮನೆಯವರು ಕೆಲವು ದಿನಗಳ ಹಿಂದೆ ಅಲೆಕ್ಸಾಂಡ್ರಾ ಬಾಯ್ ಫ್ರೆಂಡ್ ಅವರ ಮನೆಯಿಂದ ಹೊರಬಂದಿದ್ದನ್ನು ನೋಡಿದ್ದು. ಅಂದಿನಿಂದ ಅಲೆಕ್ಸಾಂಡ್ರಾ ಬಹಳ ಖಿನ್ನತೆಯಲ್ಲಿದ್ದರು ಮತ್ತು ಮನೆಯಿಂದ ಹೊರಗೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.


    ಇತ್ತೀಚಿನ ವರದಿಯ ಪ್ರಕಾರ, ಆಕೆಯ ದೇಹವು ಉತ್ತರ ಗೋವಾದಲ್ಲಿ ಆಕೆಯ ಕೊಠಡಿಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತನಿಖೆ ಆರಂಭವಾಗಿದ್ದು, ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿರಬಹುದು ಎಂದು ಪೊಲೀಸರು ನಿರೀಕ್ಷಿಸುತ್ತಿದ್ದಾರೆ, ಆದರೆ ಅವರು ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply