ಕುಂದಾಪುರದಲ್ಲಿ ಆತಂಕ ಸೃಷ್ಠಿಸಿದ್ದ ಚಿರತೆ ಬೋನಿಗೆ

ಉಡುಪಿ ನವೆಂಬರ್ 16 : ಕುಂದಾಪುರದಲ್ಲಿ ಕಳೆದ ತಿಂಗಳಿನಿಂದ ಸ್ಥಳೀಯರಲ್ಲಿ ಆತಂಕ ಮೂಡಿಸಿದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ.
ಕುಂದಾಪುರ ತಾಲೂಕಿನ ಕಾಳಾವರದ ಕಕ್ಕೇರಿ ಎಂಬಲ್ಲಿ ಈ ಘಟನೆ ನಡೆದಿದೆ. ಕಳೆದ ತಿಂಗಳಿನಿಂದ ಜನರಲ್ಲಿ ಆತಂಕ ಮೂಡಿಸಿದ್ದ ಮತ್ತೊಂದು ಚಿರತೆ ಇಂದು ಮುಂಜಾನೆ ಬೋನಿಗೆ ಬಿದ್ದಿದೆ.

ಕೆಲವು ದಿನಗಳ ಹಿಂದೆ ವಾರಾಹಿ ಕಾಲುವೆ ಬಳಿಯ ಹಾಡಿ ಪ್ರದೇಶದಲ್ಲಿ 2 ಚಿರತೆಗಳು ಪ್ರತ್ಯಕ್ಷವಾಗಿತ್ತು ಎಂದ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಕಾಳಾವರದ ಚಂದ್ರಶೇಖರ ಹೆಗ್ಡೆ ಎನ್ನುವವರ ಜಾಗದಲ್ಲಿ ಚಿರತೆ ಹಿಡಿಯಲು ಬೋನ ನ್ನು ಅರಣ್ಯ ಇಲಾಖೆ ಇರಿಸಿತ್ತು.

ಕಾಣಿಸಿಕೊಂಡ ಎರಡು ಚಿರತೆಗಳಲ್ಲಿ ವಾರದ ಹಿಂದೆ ಹೆಣ್ಣು ಚಿರತೆ ಬೋನಿಗೆ ಸೆರೆ ಸಿಕ್ಕಿತ್ತು. ಮತ್ತೆ ಅದೆ ಜಾಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಬೋನ್ ಇರಿಸಿದ್ದರು. ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಕಾರ್ಯತಂತ್ರ ರೂಪಿಸಿದ್ದರು. ಇಂದು ಮುಂಜಾನೆ 5 ಸುಮಾರಿಗೆ ಬೋನಿನಲ್ಲಿ ಚಿರತೆ ಸೆರೆಯಾಗಿದೆ.

ಸೆರೆಯಾದ 8 ರಿಂದ 10 ವರ್ಷ ಪ್ರಾಯದ ಗಂಡು ಚಿರತೆಯನ್ನು ತಡರಾತ್ರಿಯೇ ವನ್ಯಜೀವಿ ವಲಯಕ್ಕೆ ರವಾನಿಸಿ ಸುರಕ್ಷಿತವಾಗಿ ಬಿಡಲಾಯಿತು. ಆರ್ .ಎಫ್ ಓ ಪ್ರಭಾಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

VIDEO

Facebook Comments

comments