Connect with us

    DAKSHINA KANNADA

    ಅರವಳಿಕೆ ಔಷಧಿ ನೀಡಲು ಓದ್ದಾಡಿದ ಅರಣ್ಯ ಇಲಾಖೆ ಸಿಬ್ಬಂದಿ..ಬಾತ್ ರೂಮ್ ನಲ್ಲಿ ಲಾಕ್ ಆಗಿದ್ದ ಚಿರತೆ ಎಸ್ಕೇಪ್

    ಪುತ್ತೂರು ಫೆಬ್ರವರಿ 3: ಬಾತರೂಮಿನಲ್ಲಿ ಲಾಕ್ ಆಗಿದ್ದ ಚಿರತೆಯನ್ನು ಕೂಡ ಸರಿಯಾಗಿ ಹಿಡಿಲು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಆಗದೆ ಅದನ್ನು ಎಸ್ಕೇಪ್ ಆಗಲು ಬಿಟ್ಟ ಘಟನೆ ಪುತ್ತೂರಿನ ಕಡಬದಲ್ಲಿ ನಡೆದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯಾಚರಣೆ ಈಗ ನಗೆಪಟಾಲಿಗೀಡಾಗಿದೆ.


    ನಾಯಿ ಹಿಡಿಯಲು ಬಂದು ಮನೆ ಬಳಿಯ ಟಾಯ್ಲೆಟ್ ನುಗ್ಗಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ ವಿಫಲವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಕೈಕಂಬದಲ್ಲಿ ಮನೆಯ ಟಾಯ್ಲೆಟ್‌ ಒಳಗೆ ಸೇರಿದ್ದ ಚಿರತೆ ಇದೀಗ ತಪ್ಪಿಸಿಕೊಂಡು ಕಾಡಿನತ್ತ ಓಡಿದೆ. ಚಿರತೆಯನ್ನು ಬೋನಿಗೆ ಹಾಕಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತ್ತು. ಅರವಳಿಕೆ ಮದ್ದು ನೀಡಲು ಯತ್ನಿಸುತ್ತಿರುವ ವೇಳೆ ತಪ್ಪಿಸಿಕೊಂಡು ಓಡಿದೆ.


    ಸರಿಯಾದ ತರಬೇತಿ ಇಲ್ಲದೇ ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಹರಸಾಹಸ ಪಟ್ಟರು ಆದರೂ ಚಿರತೆ ಪರಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯಾಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಏರ್ ಗನ್ ಇದ್ದರೂ ಸರಿಯಾದ ರೀತಿಯಲ್ಲಿ ಆಪರೇಟ್ ಮಾಡಲೂ ಅರಣ್ಯ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಸ್ಮೃತಿ ತಪ್ಪಿಸುವ ಔಷಧ ತುಂಬಿಸುವ ಬಗ್ಗೆ ಸ್ಥಳೀಯ ಪಶುಸಂಗೋಪನಾ ಅಧಿಕಾರಿಗಳಲ್ಲಿ ಸಹ ಗೊಂದಲ ಏರ್ಪಾಡಾಗಿತ್ತು.

    ಸರಿಯಾದ ವ್ಯವಸ್ಥೆ ಇಲ್ಲದೇ ಚಿರತೆ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದ್ದು, ಚಿರತೆ ಸಿಗದೇ ತಪ್ಪಿಸಿಕೊಂಡು ಓಡಿ ಹೋಗಿದೆ. ಮುಂದಿನ ದಿನಗಳಲ್ಲಾದರೂ ಸರಿಯಾಗಿ ಅರಿವಳಿಕೆ ಔಷಧ ಗನ್ ಅಪರೇಟ್ ಮಾಡುವ ಅಧಿಕಾರಿಗಳನ್ನು ಈ ಪ್ರದೇಶದಲ್ಲಿ ನೇಮಕ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply