ರೇವಣ್ಣ ರಾಜಕೀಯ ನಿವೃತ್ತಿ ತಡೆದ ಲಿಂಬೆಹಣ್ಣು – ಕೋಟ ಶ್ರೀನಿವಾಸ ಪೂಜಾರಿ

ಉಡುಪಿ ಮೇ 28: ನರೇಂದ್ರ ಮೋದಿ ಮರು ಆಯ್ಕೆಯಾದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಹೇಳಿ ಇನ್ನು ರಾಜಕೀಯದಲ್ಲಿ ಮುಂದುವರೆದಿರುವ ರೇವಣ್ಣ ಅವರಿಗೆ ವಿಧಾನಪರಿಷತ್ ವಿರೋಧ ಪಕ್ಷದ ನಾಯರ ಕೋಟ ಶ್ರೀನಿವಾಸ ಪೂಜಾರಿ ಕಾಲೆಳೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಮರು ಆಯ್ಕೆ ಆದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದ ಸಚಿವ ರೇವಣ್ಣ ಅವರನ್ನು ಅವರ ಪ್ರೀತಿಯ ಲಿಂಬೆಹಣ್ಣು ರಾಜಕಾರಣ ಬಿಡಬೇಡ ಅಂದಿರಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರ ಆಡಳಿತ ಮತ್ತು ಜನಾಭಿಪ್ರಾಯ ಎರಡಲ್ಲೂ ನಿರ್ಜೀವವಾಗಿದೆ. ಸತ್ತುಹೋದ ಸರ್ಕಾರಕ್ಕೆ ಆಮ್ಲಜನಕ ತುಂಬುವ ಕೆಲಸ ಆಗ್ತಿದೆ. ಸಿಎಂ ಕುಮಾರಸ್ವಾಮಿ ಸರ್ಕಾರ ನಡೆಸುವ ಸ್ಥಿತಿಯಲ್ಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನಾದೇಶ ಬಂದಾಗಿದೆ. ಮೊದಲು ಖುರ್ಚಿಯಿಂದ ಕೆಳಗಿಳಿರಿ ಎಂದರು.

ಕರಾವಳಿಯ ಜನರಿಗೆ ಬುದ್ದಿ ಇಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಈಗ ಕರಾವಳಿಯ ಇಬ್ಬರು ಸಚಿವರನ್ನು ಸಂಪುಟದಿಂದ ಬಿಡಲು ತಯಾರಿ ನಡೆಸಿದ್ದಾರೆ ಎಂದು ಆರೋಪಿಸಿದ ಅವರು ಕರಾವಳಿ ಜನರಿಗೆ ಬುದ್ದಿ ಇಲ್ಲ ಹಾಗಾಗಿ ಜೆಡಿಎಸ್ ಗೆ ವೋಟ್ ಹಾಕಿಲ್ಲ ಅಂತೀರಿ. ಈಗ ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ವೋಟ್ ಹಾಕಿಲ್ಲ. ಹಾಗಾದರೆ ರಾಜ್ಯದ ಜನತೆಗೆ ಬುದ್ದಿ ಇಲ್ಲ ಅಂತೀರಾ ಎಂದು ಪ್ರಶ್ನಿಸಿದರು.

25 Shares

Facebook Comments

comments