LATEST NEWS
ಶಾಸಕ ಸುನಿಲ್ ಕುಮಾರ್ ಭಗವಂತನಿಗೂ ಮೋಸ ಮಾಡಿದ್ದಾರೆ – ಲಕ್ಷ್ಮೀ ಹೆಬ್ಬಾಳ್ಕರ್
ಉಡುಪಿ ಅಗಸ್ಟ್ 15: ದೇವರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದವರು ಈಗ ಭಗವಂತನಿಗೂ ಮೋಸ ಮಾಡಿದ್ದಾರೆ. ಇದು ಎಲ್ಲರಿಗೂ ಗೊತ್ತಾಗಿದೆ. ಪರುಶುರಾಮ ಮೂರ್ತಿ ಕಂಚಿನದ್ದೋ ಫೈಬರದ್ದೋ ಅಂತ ಜಗಜ್ಜಾಹಿರವಾಗಿದೆ ಎಂದು ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಸಚಿವ ವಿ ಸುನೀಲ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.,
ಉಡುಪಿಯಲ್ಲಿ ಮಾತನಾಡಿದ ಅವರು ಶಾಸಕ ಸುನಿಲ್ ಕುಮಾರ್ ಈಗಲೂ ಪರುಶುರಾಮ ಮೂರ್ತಿ ಪೈಬರ್ ಅಲ್ಲ ಕಂಚಿನದ್ದು ಎನ್ನುತ್ತಿದ್ದಾರೆ. ಇವರಿಗೆ ಸುಳ್ಳನ್ನು ಸಾವಿರ ಸಲ ಹೇಳಿ ಅದನ್ನು ಸತ್ಯ ಎಂದು ನಂಬಿಸುವ ವಿದ್ಯೆ ಕರಗತವಾಗಿದೆ ಎಂದರು. ಉಡುಪಿಯ ಜನತೆ ಎಚ್ಚೆತುಕೊಳ್ಳಬೇಕಾಗಿದೆ. ನಾವು ದೇವರ ಭಕ್ತರು, ಇಂತಹ ಒಂದು ಚಾಲಾಕಿತನಕ್ಕೆ ಮೊಸ ಹೋಗಬಾರದು ದೇವರನ್ನೇ ಬಿಟ್ಟಿಲ್ಲ ಇವರು ಇನ್ನು ನಿಮ್ಮನ್ನು ಬಿಡುತ್ತಾರಾ ಜನರು ಎಚ್ಚೇತ್ತುಕೊಳ್ಳ ಬೇಕಾಗಿದೆ ಎಂದರು.
ಗೋಮಾಳ ಜಾಗದಲ್ಲಿ ಮೂರ್ತಿ ಮಾಡಬಾರದು ಎಂದು ಬಿಜೆಪಿ ಸರಕಾರ ಇರುವಾಗ ಕ್ಯಾಬಿನೆಟ್ ನಲ್ಲಿ ನಿರ್ಧಾರ ತೆಗೆದುಕೊಂಡಿದ್ದರು. ಬಿಜೆಪಿಯವರ ದ್ವಂದ್ವ ನಿಲವು ಹೇಗಿದೆ ನೋಡಿ ಅವರೇ ಕ್ಯಾಬಿನೆಟ್ ನಲ್ಲಿ ನಿರ್ಧಾರ ತೆಗೆದುಕೊಂಡು ಬಳಿಕ ಗೋಮಾಳ ಜಾಗ ಅಲ್ಲ ಎಂದಿದ್ದಾರೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.
ಸಿಎಂ ಸಿದ್ದರಾಮಯ್ಯ ಅವರು ಮೂರ್ತಿಯನ್ನು ಸಂಪೂರ್ಣಗೊಳಿಸಿ ಪ್ರತಿಷ್ಠೆ ಮಾಡಲು ಹೇಳಿದ್ದಾರೆ ನಾವು ಮಾಡುತ್ತೇವೆ ಎಂದರು.
You must be logged in to post a comment Login