ಪಂಜಾಬ್ ಫೆಬ್ರವರಿ 09: ಕಾನೂನು ವಿಧ್ಯಾರ್ಥಿಯೊಬ್ಬ ತರಗತಿಯಲ್ಲಿ ತನ್ನ ಸಹಪಾಠಿ ವಿಧ್ಯಾರ್ಥಿಯನ್ನಿ ಶೂಟ್ ಮಾಡಿ ಹತ್ಯೆಗೈದು ಬಳಿಕ ತಾನೂ ಗನ್ ನಿಂದ ಶೂಟ್ ಮಾಡಿಕೊಂಡ ಘಟನೆ ಪಂಜಾಬ್ನ ತರಣ್ ಜಿಲ್ಲೆಯಲ್ಲಿ ನಡೆದಿದೆ.

ವಿಧ್ಯಾರ್ಥಿನಿ ಸಂದೀಪ್ ಕೌರ್ ಸ್ಥಳದಲ್ಲೇ ಸಾವನಪ್ಪಿದರೆ ಆರೋಪಿ ಪ್ರಿನ್ಸ್ ರಾಜ್ ತೀವ್ರವಾಗಿ ಗಾಯಗೊಂಡಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ – ಹಾಡುಹಗಲೇ ಕಿಡ್ನಾಪ್ ಕೃತ್ಯ ನಡೆದಿರೋದು ಪೋಲಿಸ್ ವೈಫಲ್ಯಕ್ಕೆ ಉದಾಹರಣೆ – ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ
ದಾಳಿಕೋರ ಪ್ರಿನ್ಸ್ ರಾಜ್ ಮತ್ತು ಬಲಿಯಾದ ಸಂದೀಪ್ ಕೌರ್ ಇಬ್ಬರೂ ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳು ಮತ್ತು ಸಹಪಾಠಿಗಳಾಗಿದ್ದರು. ಅವರು ಸುಮಾರು 19-20 ವರ್ಷ ವಯಸ್ಸಿನವರಾಗಿದ್ದರು.
ಪ್ರಿನ್ಸ್ ತರಗತಿಯೊಳಗೆ ಸಂದೀಪ್ ಮೇಲೆ ಗುಂಡು ಹಾರಿಸಿ ಆಕೆಯ ಸಾವಿಗೆ ಕಾರಣನಾದ, ನಂತರ ತಾನು ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಜಗ್ಬೀರ್ ಸಿಂಗ್ ತಿಳಿಸಿದ್ದಾರೆ ಘಟನೆ ನಡೆದಾಗ ತರಗತಿ ಇನ್ನೂ ಪ್ರಾರಂಭವಾಗಿರಲಿಲ್ಲ, ಕೊಲೆಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಶ್ರೀ ಸಿಂಗ್ ಹೇಳಿದರು.
ಇದನ್ನೂ ಓದಿ –ಬೆಳ್ತಂಗಡಿ – ಕಾಲೇಜಿಗೆ ತೆರಳುತ್ತಿದ್ದ ಯುವತಿಯ ಅಪಹರಣಕ್ಕೆ ಯತ್ನ- ಆರೋಪಿಗಳು ಪರಾರಿ
ತರಗತಿಯಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಲ್ಲಿ ವಿದ್ಯಾರ್ಥಿನಿ ತರಗತಿಯಲ್ಲಿ ಒಟ್ಟಿಗೆ ಇರುವುದು ಕಂಡುಬಂದಿದೆ. ಇತರ ಕೆಲವು ವಿದ್ಯಾರ್ಥಿಗಳನ್ನು ಸಹ ಕಾಣಬಹುದು. ಇದ್ದಕ್ಕಿದ್ದಂತೆ, ಪ್ರಿನ್ಸ್ ರಾಜ್ ತಮ್ಮ ಮೇಜಿನಿಂದ ಎದ್ದು ಕೌರ್ ಮೇಲೆ ಗುಂಡು ಹಾರಿಸಿದರು. ನಂತರ ಅವರು ತಲೆಗೆ ಗುಂಡು ಹಾರಿಸಿಕೊಂಡು ನೆಲದ ಮೇಲೆ ಬಿದ್ದಿದ್ದಾನೆ.