ಸಿರಿಬಾಗಿಲು ಗುಡ್ಡ ಕುಸಿತ ಮಂಗಳೂರು ಬೆಂಗಳೂರು ರೈಲು ಸಂಚಾರ ಸ್ಥಗಿತ

ಮಂಗಳೂರು ಜುಲೈ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಂಗಳೂರು -ಬೆಂಗಳೂರು ರೈಲು ಸಂಚಾರ ಸ್ಥಗಿತಗೊಂಡಿದೆ.

ಭಾರಿ ಮಳೆಯಿಂದಾಗಿ ಸುಬ್ರಹ್ಮಣ್ಯ ನೆಟ್ಟಣ ಹಾಗೂ ಸಕಲೇಶಪುರ ಮಾರ್ಗ ಮಧ್ಯೆ ಇರುವ ಸಿರಿಬಾಗಿಲು ಎಂಬಲ್ಲಿ ಹಳಿ ಮೇಲೆ ಗುಡ್ಡ ಕುಸಿತ ಹಿನ್ನೆಲೆಯಲ್ಲಿ ಮಂಗಳೂರು- ಬೆಂಗಳೂರು ರೈಲು ಸಂಚಾರಕ್ಕೆ ತೊಡಕಾಗಿದೆ.

ಘಾಟ್ ಪ್ರದೇಶದಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಈ ಗುಡ್ಡ ಕುಸಿತ ಉಂಟಾಗಿದೆ. ಈ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ನಿನ್ನೆ ಅಪರಾಹ್ನ ಹೊಟ್ಟಿದ್ದ ಮಂಗಳೂರು-ಬೆಂಗಳೂರು ರೈಲು ನೆಟ್ಟಣ ರೈಲ್ವೇ ನಿಲ್ದಾಣದಲ್ಲಿ ಸ್ಥಗಿತವಾಗಿತ್ತು.

ರೈಲ್ವೇ ನಿಲ್ದಾಣದಲ್ಲಿ ವ್ಯವಸ್ಥೆಗಳಿಲ್ಲದೆ ಪ್ರಯಾಣಿಕರು ಪರದಾಟುವಂತಾಗಿತ್ತು. ಒಂದು ಕಡೆ ವಿಪರೀತ ಮಳೆ- ಮತ್ತೊಂದಡೆ ಅರ್ಧದಲ್ಲೇ ನಿಂತ ರೈಲಿನಿಂದಾಗಿ ಪ್ರಯಾಣಿಕರು ತೆರಳಲು ಬಸ್ಸಿನಲ್ಲಿ ತೆರಳಲು ಸರಕಾರಿ ಬಸ್ ಗಳ ವ್ಯವಸ್ಥೆ ಮಾಡದ ರೈಲ್ವೇ ಅಧಿಕಾರಿಗಳ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.

Facebook Comments

comments