ಜಮೀನಿನ ನಕ್ಷೆ ಸಿದ್ದಪಡಿಲು ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್‌ ಎಸಿಬಿ ಬಲೆಗೆ

ಪುತ್ತೂರು ಅಕ್ಟೋಬರ್ 4: ಜಮೀನಿನ ನಕ್ಷೆ ಸಿದ್ದಪಡಿಲು ಲಂಚ ಸ್ವೀಕರಿಸುತ್ತಿದ್ದ ಸರ್ವೇಯರ್‌ ಎಸಿಬಿ ಬಲೆಗೆ ಬಿದ್ದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರು ತಾಲೂಕು ಸರ್ವೇಯರ್ ಎಂ. ಶಿವಕುಮಾರ್ ಸಿಕ್ಕಿಬಿದ್ದ ಸರ್ವೇಯರ್. ಗೋಪಾಲ ಮುಗೇರ ಎಂಬಾತನಿಂದ 5000 ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ.

ಗೋಪಾಲ ಮುಗೇರ ಜಮೀನಿನ ನಕ್ಷೆಗಾಗಿ ಸರ್ವೇಯರ್ ಎಂ. ಶಿವಕುಮಾರ್ 30 ಸಾವಿರ ರೂಪಾಯಿಗಳ ಡಿಮ್ಯಾಂಡ್ ಇಟ್ಟಿದ್ದು, ಚರ್ಚೆಯ ಬಳಿಕ ಲಂಚದ ಹಣವನ್ನ 20 ಸಾವಿರಕ್ಕೆ ಇಳಿಸಿದ್ದ. ಇಂದು ಲಂಚದ ಮೊದಲ ಕಂತಿನ 5 ಸಾವಿರ ಸ್ವೀಕರಿಸುತ್ತಿದ್ದಾಗಲೇ ಎಸಿಬಿ ಬಲೆಗೆ ಬಿದ್ದಿದ್ದಾನೆ. ಲಂಚಕೋರ ಸರ್ವೇಯರ್ ಶಿವಕುಮಾರ್ ನನ್ನು ಎಸಿಬಿ ಪೋಲೀಸರು ಬಂಧಿಸಿದ್ದಾರೆ.