Connect with us

    LATEST NEWS

    ಮಳೆ ಅಬ್ಬರ – ಪಡೀಲು ಬಳಿ ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ….!!

    ಮಂಗಳೂರು ಜೂನ್ 30: ಮಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಪಡೀಲು ಬಳಿ ಗುರುವಾರ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ ಎರಡು ರೈಲುಗಳ ಸಂಚಾರವನ್ನ ರೈಲ್ವೆ ಇಲಾಖೆ ರದ್ದು ಮಾಡಿದೆ.


    ಮಂಗಳೂರು-ಸುಬ್ರಹ್ಮಣ್ಯ ಮಾರ್ಗದ ಎರಡು ವಿಶೇಷ ರೈಲುಗಳ(.06488 ಮತ್ತು .06489) ಸಂಚಾರ ಗುರುವಾರ ಸ್ಥಗಿತಗೊಂಡಿದೆ. ರೈಲು ಹಳಿ ಮೇಲೆ ಕುಸಿದ ಗುಡ್ಡವನ್ನ ತೆರವು ಮಾಡುವ ಕಾರ್ಯ ನಡೆಯುತ್ತಿದೆ.

    ಇನ್ನು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬುಧವಾರ ರಾತ್ರಿಯಿಂದ ಧಾರಾಕಾರ ಮಳೆಯಾಗುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಅಡಕೆ, ತೆಂಗು ತೋಟ ಸೇರದಂತೆ ಕೃಷಿ ಜಮೀನುಗಳು ಮಿನಿಕೆರೆಯಂತಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ

    Share Information
    Advertisement
    Click to comment

    You must be logged in to post a comment Login

    Leave a Reply